ಸ್ಟಾಲಿನ್: ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕ

ತಮಿಳುನಾಡಿನ 15ನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಡಿಎಂಕೆ ಖಜಾಂಚಿ ಎಂ.ಕೆ.ಸ್ಟಾಲಿನ್...
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್

ಚೆನ್ನೈ: ತಮಿಳುನಾಡಿನ 15ನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಡಿಎಂಕೆ ಖಜಾಂಚಿ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಡಿಎಂಕೆಯ ಶಾಸಕಾಂಗ ಪಕ್ಷದ ನಾಯಕರೂ ಕೂಡ ಆಗಿದ್ದಾರೆ.

ನೂತನ ಶಾಸಕರ ಸಭೆಯನ್ನು ಪಕ್ಷದ ಕೇಂದ್ರ ಕಚೇರಿ ಚೆನ್ನೈನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಶಾಸಕರು ಸ್ಟಾಲಿನ್ ಅವರನ್ನು ತಮ್ಮ ನಾಯಕನನ್ನಾಗಿ ಆರಿಸಿದರು.ಈ ನಿರ್ಧಾರವನ್ನು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ, ಪ್ರಧಾನ ಕಾರ್ಯದರ್ಶಿ ಕೆ. ಅನ್ಬಝಗನ್ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಕೈಗೊಳ್ಳಲಾಯಿತು.

ಸ್ಟಾಲಿನ್ ಕೊಲತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಎಡಿಎಂಕೆಯ ಜೆಸಿಡಿ ಪ್ರಭಾಕರ್ ಅವರನ್ನು 37 ಸಾವಿರದ 730 ಮತಗಳಿಂದ ಸೋಲಿಸಿದ್ದರು. ಇನ್ನು ನೂತನ ವಿಧಾನಸಭೆಯ ವಿಪ್ ಆಗಿ ಎ.ಚಕ್ರಪಾಣಿ ಆಯ್ಕೆಯಾಗಿದ್ದಾರೆ.

ವಿಧಾನಸಭೆಯಲ್ಲಿ 89 ಸದಸ್ಯ ಬಲವನ್ನು ಹೊಂದಿರುವ ಡಿಎಂಕೆ ಪ್ರಮುಖ ಪ್ರತಿಪಕ್ಷವಾಗಿದೆ. ಕಳೆದ ವಿಧಾನಸಭೆಯಲ್ಲಿ ಕೇವಲ 23 ಶಾಸಕರನ್ನು ಹೊಂದಿದ್ದ ಡಿಎಂಕೆಗೆ ಪ್ರತಿಪಕ್ಷ ಸ್ಥಾನ ಸಿಕ್ಕಿರಲಿಲ್ಲ.

ತಮ್ಮನ್ನು ಪಕ್ಷದ ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಸ್ಟಾಲಿನ್ ಕರುಣಾನಿಧಿ ಹಾಗೂ ಇತರ ಶಾಸಕರಿಗೆ ಧನ್ಯವಾದ ಹೇಳಿದರು. ಪ್ರಜಾಪ್ರಭುತ್ವದ ತತ್ವ, ಆಶಯಗಳನ್ನು ರಕ್ಷಿಸಿ ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ. ಶಾಸಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ವಿರೋಧ ಪಕ್ಷದ ನಾಯಕನಾಗಿ ಉತ್ತಮ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಟಾಲಿನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com