ಆರೋಪವನ್ನು ತಳ್ಳಿ ಹಾಕಿರುವ ಜಯಲಲಿತಾ, ಉದ್ದೇಶ ಪೂರ್ವಕವಾಗಿ ಸ್ಟ್ಯಾಲಿನ್ ಅವರನ್ನು ಹಿಂಬದಿಯಲ್ಲಿ ಕೂರಿಸಿಲ್ಲ. ಸಾರ್ವಜನಿಕ ಇಲಾಖೆಗೆ ಪ್ರೋಟಾಕಾಲ್ ಕೈಪಿಡಿ ಆಧಾರದ ಮೇಲೆ ಕುರ್ಚಿಗಳನ್ನು ವ್ಯವಸ್ಥೆ ಮಾಡಿ ಎಂದು ಸೂಚಿಸಲಾಗಿತ್ತು. ಆದರೆ, ಅಲ್ಲಿ ಏನೋ ತಪ್ಪಾಗಿದೆ. ಇದರಿಂದ ಸ್ಟ್ಯಾಲಿನ್ ಅವರಿಗೆ ಅಸಮಾಧಾನವಾಗಿದೆ ಎಂದು ಅರ್ಥವಾಗುತ್ತದೆ. ಸ್ಟ್ಯಾಲಿನ್ ಕಾರ್ಯಕ್ರಮಕ್ಕೆ ಬಂದಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದ್ದರೆ, ಅಧಿಕಾರಿಗಳಿಗೆ ಅವರನ್ನು ಮೊದಲ ಸಾಲಿನಲ್ಲಿ ಕೂರಿಸಲು ಸೂಚಿಸುತ್ತಿದ್ದೆ. ಆದರೆ, ಅವರು ಬಂದಿರುವುದಾಗಿ ಯಾರು ನನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಜಯಲಲಿತಾ ಸ್ಪಷ್ಟನೇ ನೀಡಿದ್ದಾರೆ.