ಟೀನಾ ದಬಿ
ದೇಶ
ಬಡವರು, ಮಹಿಳೆಯರಿಗಾಗಿ ದುಡಿಯುವೆ: ಯುಪಿಎಸ್ ಸಿ ಟಾಪರ್
ಸಮಾಜ ಸೇವೆಗೆ ನನ್ನನ್ನು ಮುಡಿಪಾಗಿಸಿಕೊಳ್ಳವೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ನಡೆಸಿದ್ದ 2015ನೇ...
ನವದೆಹಲಿ: ಸಮಾಜ ಸೇವೆಗೆ ನನ್ನನ್ನು ಮುಡಿಪಾಗಿಸಿಕೊಳ್ಳವೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ನಡೆಸಿದ್ದ 2015ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದ ಗಳಿಸಿರುವ ಟೀನಾ ದಾಬಿ ಹೇಳಿದ್ದಾರೆ.
ಬಡವರು ಮತ್ತು ಮಹಿಳೆಯರಿಗಾಗಿ ದುಡಿಯುವುದೇ ನನ್ನ ಮೊದಲ ಆದ್ಯತೆ. ಪ್ರಾರಂಭದಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅದನ್ನೇ ಮುಂದುವೆರೆಸುವೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕಾದರೂ, ಬಡವರಿಗೆ ಸಹಾಯ ಮಾಡುತ್ತಿದ್ದೆ. ಇದು ನನಗೆ ಸಾರ್ವಜನಿಕರ ಸೇವೆ ಮಾಡಲು ಸ್ಫೂರ್ತಿ ತುಂಬಿದ್ದು ಎಂದು ತಿಳಿಸಿದ್ದಾರೆ.
ನನ್ನ ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಸೂತ್ರವಿಲ್ಲ. ಕಠಿಣ ಶ್ರಮದಿಂದ ಮಾತ್ರ ಇದು ಸಾಧ್ಯವಾಯಿತು. ಸಮಯವನ್ನು ನೋಡದೇ ಏಕಾಗ್ರತೆಯಿಂದ ಓದುತ್ತಿದ್ದೆ.
ನನ್ನ ಈ ಯಶಸ್ಸಿಗೆ ನನ್ನ ಕುಟುಂಬ ನೀಡಿದ ಬೆಂಬಲ. ತಾಯಿಯ ಉತ್ತೇಜನ, ತಂದೆಯ ಬೆಂಬಲ ಕಾರಣವಾಯಿತು. ಅದರ ಪ್ರತಿಫಲವೇ ನಾನು ಪ್ರಥಮ ರ್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ಟೀನಾ ದಬಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ