ಶತ್ರುವಾದ ಸ್ನೇಹಿತ: 10 ಸಾವಿರ ರು.ಗಾಗಿ ಟಿಸಿಎಸ್ ಟೆಕ್ಕಿ ಕೊಲೆ

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಟಿಸಿಎಸ್ ಕಂಪನಿ ಉದ್ಯೋಗಿ ಶವವಾಗಿ ಪತ್ತೆಯಾಗಿದ್ದಾನೆ...
ಮೃತ ಯುವಕ ಹಶ್ಮಿ
ಮೃತ ಯುವಕ ಹಶ್ಮಿ
Updated on

ಹೈದರಾಬಾದ್: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಟಿಸಿಎಸ್ ಕಂಪನಿ ಉದ್ಯೋಗಿ ಶವವಾಗಿ ಪತ್ತೆಯಾಗಿದ್ದಾನೆ.

26 ವರ್ಷದ ವಿ. ಹಸ್ಮಿ ಕೊಲೆಯಾದ ದುರ್ದೈವಿ. ಈತ ಮಾಜಿ ಸಂಸದ ಹಾಗೂ ಸಿಪಿಎಂ ಮುಖಂಡ ಪಿ ಮಧು ಅವರ ಸಂಬಂಧಿಯಾಗಿದ್ದಾನೆ.

ಬಲ್ಕಂ ಪೇಟೆಯ ಹಸ್ಮಿ ಇತ್ತೀಚೆಗೆ ಟಿಸಿಎಸ್ ಕಂಪನಿ ಸೇರಿಕೊಂಡಿದ್ದ. ಮೇ 23 ರಂದು ಬೆಳಗ್ಗೆ ಕಚೇರಿಗೆ ತೆರಳಿದ ಹಶ್ಮಿ ಸಂಜೆಯಾದರೂ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ತಾಯಿ ಆತನಿಗೆ ಕರೆ ಮಾಡಿದ್ದಾರೆ. ಜೊತೆಗೆ ಹಶ್ಮಿ ಸಂಬಂದಿ ಕೂಡ ಕರೆ ಮಾಡಲು ಪ್ರಯತ್ನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಶ್ಮಿ ಮೊಬೈಲ್ ಇರುವ ಸ್ಥಳವನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳಿದಾಗ ಆತ ಕೊಲೆಯಾಗಿರುವುದು ಪತ್ತೆಯಾಗಿದೆ.

ಮೇ 23 ರ ಸಂಜೆ ಎಲೆಕ್ಟ್ರಿಷಿಯನ್ ಆಗಿದ್ದ  ನರೇಶ್ ಹಶ್ಮಿಗೆ ಕರೆ ಮಾಡಿ ಕುಕ್ಕಟಪಳ್ಳಿ ಬಳಿ ಬರುವಂತೆ ತಿಳಿಸಿದ.  ರಾತ್ರಿ 8.30ರ ವೇಳೆಗೆ ಕಚೇರಿಯಿಂದ ಹೊರಟ ಹಶ್ಮಿ ನರೇಶ್ ನನ್ನು ಭೇಟಿ ಮಾಡಿದ. ಅಲ್ಲಿಂದ ಲಿಂಗಂಪಳ್ಳಿ ಎಂಬಲ್ಲಿಗೆ ತನ್ನ ಬೈಕ್ ನಲ್ಲೇ ಕರೆದು ಕೊಂಡು ಹೋದ ರಮೇಶ್ 10 ಸಾವಿರ ರು. ನೀಡುವಂತೆ ಕೇಳಿದ್ದಾನೆ. ಇದನ್ನು ನಯವಾಗಿ ನಿರಾಕರಿಸಿದ ಹಶ್ಮಿ ತನ್ನ ಬಳಿ ಅಷ್ಟೊಂದು ಹಣ ಇಲ್ಲವೆಂದು ಹೇಳಿದ್ದಾನೆ. ನಂತರ ಲಿಂಗನಪಳ್ಳಿ ಅಂಡರ್ ಪಾಸ್ ನಿಂದ ಮುಂದೆ ಕರೆದುಕೊಂಡು ಹೋದ ನರೇಶ್, ಕಲ್ಲಿನಿಂದ ಜಜ್ಜಿ ಆತನನ್ನು ಕೊಲೆ ಮಾಡಿದ್ದಾನೆ.

ಹಶ್ಮಿ ಬಳಿ ಹೆಚ್ಚನ ಮೊತ್ತದ ಹಣವಿದ್ದು, ಅದನ್ನು ದೋಚಬಹುದು ಎಂದು ಊಹಿಸಿದ್ದ ನರೇಶ್ ಗೆ ನಿರಾಶೆಯಾಯಿತು. ಹಶ್ನಿ ಬಳಿ ಚಿನ್ನದ ಸರ ಮತ್ತು ಮೊಬೈಲ್ ಬಿಟ್ಟರೆ ದೊಡ್ಡ ಮೊತ್ತದ ಹಣವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com