
ಚಂಡೀಗಢ: ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸಿರುವ ಹರ್ಯಾಣ ಸರ್ಕಾರದ ನಿರ್ಧಾರಕ್ಕೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗಳು ತಡೆಯಾಜೆ ತಂದಿವೆ.
ಕಳೆದ ಮಾರ್ಚ್ 29ರಂದು ಹರ್ಯಾಣ ವಿಧಾನಸಭೆ ಅವಿರೋಧವಾಗಿ ಅನುಮೋದನೆ ಮಾಡಿದ ಹರ್ಯಾಣ ಹಿಂದುಳಿದ ವರ್ಗಗಳ ಕಾಯ್ದೆ-2016ರ ಸಾಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಮೂರ್ತಿ ಎಸ್.ಎಸ್.ಸರೋನ್ ಅವರ ನೇತೃತ್ವದ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
Advertisement