ಗಣ ರಾಜ್ಯೋತ್ಸವ ದಿನದಂದು ಹಿರಿಯ ಅಧಿಕಾರಿಯಿಂದ ಕಿರುಕುಳ: ನೌಕಾಪಡೆ ಮಹಿಳೆ ಆರೋಪ

ದೆಹಲಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ನೌಕಾ ಪಡೆಯ ಮಹಿಳಾ ಸಿಬ್ಬಂದಿಗೆ ಎರಡು ಬಾರಿ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಒಂದೆಡೆ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಶಸ್ತ್ರಾಸ್ತ್ರ ಪಡೆಗೆ, ವಾಯು ಪಡೆಗೆ ಮಹಿಳೆಯರನ್ನು ನೇಮಿಸಲು ಮುಂದಾಗಿದೆ. ಆದರೆ ದೆಹಲಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ನೌಕಾ ಪಡೆಯ ಮಹಿಳಾ ಸಿಬ್ಬಂದಿಗೆ ಎರಡು ಬಾರಿ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ.

2014ರ ಗಣರಾಜ್ಯೋತ್ಸವ ದಿನದ ಪೆರೇಡ್ ನಂದು ರಾಷ್ಟ್ರಪತಿಗಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕಿರುಕುಳ ಅನುಭವಿಸಲಾಯಿತು ಎಂದು ಸಂತ್ರಸ್ತೆ ದೂರಿದ್ದಾರೆ.

ದುರಾದೃಷ್ಟವೆಂದರೇ ಈ ವರ್ಷ ಕಿರುಕುಳ ನೀಡಿದ ಅಧಿಕಾರಿಗೆ ವಿಶಿಷ್ಟ ಸೇವಾ ಪದಕ ದೊರೆತಿದೆ. ಇನ್ನೂ ಈ ಆರೋಪದ ಹಿನ್ನೆಲೆಯಲ್ಲಿ ಕಿರುಕುಳ ನೀಡಿದ ಅಧಿಕಾರಿಯನ್ನು ರಜೆ ಮೇಲೆ ಕಳುಹಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಸಂತ್ರಸ್ತೆ ಮತ್ತು ಕಿರುಕುಳ ನೀಡಿರುವ ಅಧಿಕಾರಿ ಇಬ್ಬರು ನೌಕಾಪಡೆಯಲ್ಲಿ ವೈದ್ಯರಾಗಿದ್ದಾರೆ. ಮೇ ತಿಂಗಳಲ್ಲಿ ಎರಡು ಬಾರಿ ತನಗೆ ಸರ್ಜನ್ ಆಗಿರುವ ವೈದ್ಯ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com