ಹೆಬ್ಬಾವಿನಿಂದ ಕಚ್ಚಿಸಿಕೊಂಡಿದ್ದ ವ್ಯಕ್ತಿ
ದೇಶ
ಶೌಚಾಲಯದಲ್ಲಿ ಜನನಾಂಗಕ್ಕೆ ಹೆಬ್ಬಾವು ಕಚ್ಚಿದ್ದ ವ್ಯಕ್ತಿ ಚೇತರಿಕೆ
ಶೌಚಾಲಯದಲ್ಲಿ ಹೆಬ್ಬಾವಿನಿಂದ ಜನನಾಂಗಕ್ಕೆ ಕಚ್ಚಿಸಿಕೊಂಡು ಅಸ್ವಸ್ಥಗೊಂಡಿದ್ದ ಥಾಯ್ ಮೂಲದ ಯುವಕ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ...
ಬ್ಯಾಂಕಾಕ್: ಶೌಚಾಲಯದಲ್ಲಿ ಹೆಬ್ಬಾವಿನಿಂದ ಜನನಾಂಗಕ್ಕೆ ಕಚ್ಚಿಸಿಕೊಂಡು ಅಸ್ವಸ್ಥಗೊಂಡಿದ್ದ ಥಾಯ್ ಮೂಲದ ಯುವಕ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.
ಬ್ಯಾಂಕಾಕ್ ನಲ್ಲಿ ನೆಲೆಸಿರುವ ಅತಫೋರ್ನ್ ಎಂಬಾತ ತನ್ನ ಮನೆಯ ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ 10 ಅಡಿ ಉದ್ದದ ಹೆಬ್ಬಾವು ಆತನ ಜನನಾಂಗಕ್ಕೆ ಕಚ್ಚಿತ್ತು. ಅಸ್ವಸ್ತಗೊಂಡಿದ್ದ ಅತಪೋರ್ನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೋಗನಿರೋಧಕ ಔಷಧಿಗಳ ಮೂಲಕ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಕೆಲ ದಿನಗಳಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

