ಸಿಂಧೂ ನದಿ ನಾಗರಿಕತೆ ಕನಿಷ್ಠ 8 ಸಾವಿರ ವರ್ಷಗಳಷ್ಟು ಹಳೆಯದ್ದು!

ಸಿಂಧೂ ನದಿ ನಾಗರಿಕತೆ ಬಗ್ಗೆ ಐಐಟಿ ಖರಗ್ಪುರ ಹಾಗೂ ಭಾರತೀಯ ಪುರಾತತ್ವ ಇಲಾಖೆ ನಡೆಸಿರುವ ಸಂಶೋಧನೆ ಹೊಸ ವಿಷಯವನ್ನು ಬಹಿರಂಗಪಡಿಸಿದೆ.
ಸಿಂಧೂ ನದಿ ನಾಗರಿಕತೆ
ಸಿಂಧೂ ನದಿ ನಾಗರಿಕತೆ

ನವದೆಹಲಿ: ಸಿಂಧೂ ನದಿ ನಾಗರಿಕತೆ ಬಗ್ಗೆ ಐಐಟಿ ಖರಗ್ಪುರ ಹಾಗೂ ಭಾರತೀಯ ಪುರಾತತ್ವ ಇಲಾಖೆ ನಡೆಸಿರುವ ಸಂಶೋಧನೆ ಹೊಸ ವಿಷಯವನ್ನು ಬಹಿರಂಗಪಡಿಸಿದ್ದು, ಸಿಂಧೂ ನದಿ ನಾಗರಿಕತೆ ಕನಿಷ್ಠ 8,000 ವರ್ಷಗಳಷ್ಟು ಹಳೆಯದ್ದಾಗಿದ್ದು 5 ,500 ಹಿಂದಿನದ್ದಷ್ಟಲ್ಲ ಎಂದು ತಿಳಿದುಬಂದಿದೆ.
ಸಿಂಧೂ ನಾಗರಿಕತೆ 8 ,000 ವರ್ಷಗಳ ಹಿಂದಿನದ್ದು ಎಂದಿರುವ ವಿಜ್ಞಾನಿಗಳು ಹರಪ್ಪ ನಾಗರಿಕತೆಗಿಂತಲೂ ಇದ್ದ ನಾಗರಿಕತೆ ಕನಿಷ್ಠ 1 ,000 ವರ್ಷಗಳು ಜೀವಂತವಾಗಿತ್ತು ಎಂದು ಹೇಳಿದ್ದಾರೆ.  ಟೈಮ್ಸ್ ಆಫ್ ಇಂಡಿಯಾದಲ್ಲಿ ಐಟಿ ಖರಗ್ಪುರ ಹಾಗೂ ಭಾರತೀಯ ಪುರಾತತ್ವ ಇಲಾಖೆ ನಡೆಸಿರುವ ಸಂಶೋಧನೆ ಕುರಿತ ವರದಿ ಪ್ರಕಟವಾಗಿದ್ದು, ಈ ಸಂಶೋಧನೆಯಿಂದಾಗಿ ನಾಗರಿಕತೆಯ ತೊಟ್ಟಿಲ ಬಗ್ಗೆ ಈ ವರೆಗೂ ಇದ್ದ ಮಾಹಿತಿಯನ್ನು ಬದಲಾವಣೆ ಮಾಡುವಂತಾಗಿದೆ.
ಇನ್ನು ಸುಮಾರು 3,000 ವರ್ಷಗಳ ಹಿಂದೆ ಅಂತ್ಯಗೊಳ್ಳಲು ಹವಾಮಾನ ಬದಲಾವಣೆಯೇ ಕಾರಣ ಎಂದು ವಿಜ್ಞಾನಿಗಳ ಸಂಶೋಧನೆ ಮೂಲಕ ತಿಳಿದುಬಂದಿದೆ. "ಅತಿ ಪುರಾತನ ನಾಗರಿಕತೆಯಲ್ಲಿ ಬಳಸಲಾಗುತ್ತಿದ್ದ ಮಡಿಕೆಯ ಪಾತ್ರೆಗಳ ತುಂಡುಗಳನ್ನು ಪತ್ತೆ ಮಾಡಿದ್ದೇವೆ. ಆಪ್ಟಿಕಲಿ ಸ್ಟಿಮ್ಯುಲೇಟೇಡ್ ಲ್ಯುಮಿನಿಸೆನ್ಸ್ ಎಂಬ ತಂತ್ರಜ್ಞಾನ ಬಳಸಿ ಮಡಿಕೆಯ ತೂಂಡುಗಳ ಕಾಲಮಾನವನ್ನು ತಿಳಿಯಲು ಪ್ರಥನಿಸಿದ್ದೇವೆ, ಇದರ ಪ್ರಕಾರ ಸಿಂಧೂ ನಾಗರಿಕತೆ 8 ,000 ಹಳೆಯದ್ದು ಎಂಬುದು ತಿಳಿದುಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com