ದೇಶದಲ್ಲಿವೆ 5 ಕೋಟಿ ನಕಲಿ ಚಾಲನ ಪರವಾನಗಿ: ನಿತಿನ್ ಗಡ್ಕರಿ

ದೇಶದಲ್ಲಿ ಒಟ್ಟು 5 ಕೋಟಿ ಮಂದಿ ನಕಲಿ ಡಿಎಲ್ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಇಂಥ ನಕಲಿ ಡಿಎಲ್​ಗಳಿಗೆ ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ದೇಶದಲ್ಲಿ ಒಟ್ಟು 5 ಕೋಟಿ ಮಂದಿ ನಕಲಿ ಡಿಎಲ್ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಇಂಥ ನಕಲಿ ಡಿಎಲ್​ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವಾಲಯ ಈಗಾಗಲೇ ವಿಧೇಯಕ ರೂಪಿಸಿದ್ದು, 10,000 ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಿದೆ.

ಶೇ. 30 ಡಿಎಲ್​ಗಳು ನಕಲಿಯಾಗಿದ್ದು, ಇದನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ. ಆನ್​ಲೈನ್ ವ್ಯವಸ್ಥೆ ಜಾರಿ ಗೊಳಿಸುವ ಮೂಲಕ ಡಿಎಲ್ ಪಡೆಯಲು ಕಂಪ್ಯೂಟರ್ ಪರೀಕ್ಷೆಯನ್ನು ಅಳವಡಿಸಿಕೊಳ್ಳ ಲಾಗುತ್ತದೆ. ರಾಜಕಾರಣಿ, ಅಧಿಕಾರಿ ಅಥವಾ ಸೆಲೆಬ್ರೆಟಿಗಳೂ ಇದೇ ಮಾದರಿಯಲ್ಲಿ ಪರೀಕ್ಷೆಗೆ ಒಳಗಾಗಿ ಡಿಎಲ್ ಪಡೆಯಬೇಕು. ಇದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೆ ಬರಲಿದೆ ಎಂದು ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ದೇಶಾದ್ಯಂತ 18 ಕೋಟಿ ಡಿಎಲ್ ವಿತರಿಸಲಾಗಿದ್ದು, ಈ ಪೈಕಿ 5.4 ಕೋಟಿಯನ್ನು ಬೊಗಸ್ ಎಂದು ಪರಿಗಣಿಸಲಾಗಿದೆ. ಹಿಂದಿನ ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ, ದೇಶದಲ್ಲಿರುವ ಆರು ಕೋಟಿ ಡಿಎಲ್​ಗಳಲ್ಲಿ 74 ಲಕ್ಷ ನಕಲಿ ಎಂದು ಗುರುತಿಸಲಾಗಿತ್ತು.

ರಸ್ತೆ ಸುರಕ್ಷತೆಗೆ ಕಠಿಣ ಕಾಯ್ದೆ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ವಿಚಾರವಾಗಿ ರಾಜಸ್ಥಾನದ ಸಾರಿಗೆ ಸಚಿವ ಯೂನೂಸ್ ಖಾನ್ ನೇತೃತ್ವದ ತಂಡ ಪ್ರಾಥಮಿಕ ವರದಿ ಸಲ್ಲಿಸಿದೆ. ಡಿಎಲ್ ಪಡೆಯಲು ಅನರ್ಹ ಗೊಂಡ ವ್ಯಕ್ತಿ ನಕಲಿ ಡಿಎಲ್ ಮಾಡಿಸಿಕೊಂಡು ವಾಹನ ಚಾಲನೆ ಮಾಡುತ್ತಿದ್ದರೆ ಅಂತಹವರಿಗೆ ಒಂದು ವರ್ಷ ಶಿಕ್ಷೆ ಜತೆಗೆ 10 ಸಾವಿರ ದಂಡ ವಿಧಿಸುವಂತೆ ಪ್ರಾಥಮಿಕ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಮುಂದಿನ ತಿಂಗಳು ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಸಂಸತ್​ನಲ್ಲಿ ಮಂಡಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.

ಡಿಎಲ್ ವ್ಯವಸ್ಥೆ ಯನ್ನು ಕಂಪ್ಯೂಟರೀಕರಣಗೊಳಿಸುವ ಜತೆಗೆ ದೇಶಾದ್ಯಂತ ಹೊಸತಾಗಿ 5 ಸಾವಿರ ಡ್ರೈವಿಂಗ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಇಲಾಖೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿರುವ ‘ಸ್ಥಾಪಿತ ಹಿತಾಸಕ್ತಿ’ಗಳು ಅಡ್ಡಪಡಿಸುತ್ತಿವೆ ಎಂದು ಗಡ್ಕರಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com