ಡೆಬಿಟ್ ಕಾರ್ಡ್ ಪಾವತಿಗೆ ವಿಧಿಸಿರುವ ಸೇವಾ ಶುಲ್ಕ ಹಿಂಪಡೆಯಲಿರುವ ರೈಲ್ವೆ ಇಲಾಖೆ

ರೈಲು ಟಿಕೆಟ್ ಕಾಯ್ದಿರಿಸಲು ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗೆ ವಿಧಿಸಲಾಗುತ್ತಿರುವ ಸೇವಾ ಶುಲ್ಕವನ್ನು ರೈಲ್ವೆ ಇಲಾಖೆ ಜೂ.1 ರಿಂದ ವಾಪಸ್ ಪಡೆಯಲಿದೆ.
ಡೆಬಿಟ್ ಕಾರ್ಡ್ ಪಾವತಿಗೆ ವಿಧಿಸಿರುವ ಸೇವಾ ಶುಲ್ಕ ಹಿಂಪಡೆಯಲಿರುವ ರೈಲ್ವೆ ಇಲಾಖೆ

ಚೆನ್ನೈ: ರೈಲು ಟಿಕೆಟ್ ಕಾಯ್ದಿರಿಸಲು ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗೆ ವಿಧಿಸಲಾಗುತ್ತಿರುವ ಸೇವಾ ಶುಲ್ಕವನ್ನು ರೈಲ್ವೆ ಇಲಾಖೆ ಜೂ.1 ರಿಂದ ವಾಪಸ್ ಪಡೆಯಲಿದೆ.
ಈ ಸೌಲಭ್ಯ ಟಿಕೆಟ್ ಕಾಯ್ದಿರಿಸಲಾಗುವ ಕೌಂಟರ್ ನಲ್ಲಿ ಮಾತ್ರ ಅನ್ವಯವಾಗಲಿದ್ದು, ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದಕ್ಕೆ ಅನ್ವಯವಾಗುವುದಿಲ್ಲ.  ಈ ವರೆಗೂ ಕಾಯ್ದಿರಿಸಲಾಗುವ ಕೌಂಟರ್ ಸೇವಾ ಶುಲ್ಕ ವಿಧಿಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ರೈಲು ಟಿಕೆಟ್ ಗೆ ಪಾವತಿ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಜೂ.1 ರಿಂದ ನಗದು ಹಣ ನೀಡಿ ರೈಲು ಟಿಕೆಟ್ ಕಾಯ್ದಿರಿಸದೇ ಡೆಬಿಟ್ ಕಾರ್ಡ್ ಮೂಲಕವೇ ಪಾವತಿ ಮಾಡಬಹುದಾಗಿದೆ. ಸೇವಾ ಶುಲ್ಕ ವಿಧಿಸುತ್ತಿದ್ದ ಒಂದೇ ಕಾರಣದಿಂದ ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಕಾಯ್ದಿರಿಸಲು ಹಿಂಜರಿಯುತ್ತಿದ್ದ ಪ್ರಯಾಣಿಕರು ರೈಲ್ವೆ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com