ತನ್ಮಯ್ ಭಟ್ ವಿಚಾರಣೆಗೆ ಮಾಜಿ ಐಪಿಎಸ್ ಅಧಿಕಾರಿ ವೈಪಿ ಸಿಂಗ್ ಒತ್ತಾಯ

ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಹಾಸ್ಯ ಮಾಡಿ ತಯಾರಿಸಲಾದ ವಿಡಿಯೋ...
ವೈಪಿ ಸಿಂಗ್-ತನ್ಮಯ್ ಭಟ್
ವೈಪಿ ಸಿಂಗ್-ತನ್ಮಯ್ ಭಟ್

ನವದೆಹಲಿ: ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಹಾಸ್ಯ ಮಾಡಿ ತಯಾರಿಸಲಾದ ವಿಡಿಯೋ ಗಂಭೀರ ಅಪರಾಧವಾಗಿದ್ದು ಹಾಸ್ಯನಟ ತನ್ಮಯ್ ಭಟ್ ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಬೇಕೆಂದು ಮಾಜಿ ಐಪಿಎಸ್ ಅಧಿಕಾರಿ ವೈ.ಪಿ.ಸಿಂಗ್ ಒತ್ತಾಯಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಈಗಾಗಲೇ ಅಪರಾಧ ಕ್ರಮ ಎದುರಿಸುತ್ತಿದ್ದಾರೆ ಎಂದು ಸಿಂಗ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಪರಾಧ ಪುನರಾವರ್ತನೆಯಾಗುತ್ತಿದೆ. ಇದೊಂದು ಗಂಭೀರ ವಿಷಯ. ಇಂತಹ ಆರೋಪಿಯನ್ನು ಕೂಡಲೇ ವಿಚಾರಣೆಗೆ ವಶಕ್ಕೆ ತೆಗೆದುಕೊಂಡು ತ್ವರಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇದರಿಂದ ಕಾನೂನಿನಡಿ ಅವರಿಗೆ ಶಿಕ್ಷೆ ನೀಡಲು ಸಾಧ್ಯವಿದೆ ಎಂದು ಸಿಂಗ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾರಾದರೂ ಇಂಟರ್ನೆಟ್ ನಲ್ಲಿ ನಿಂದನೆಯ ಅಥವಾ ಅಶ್ಲೀಲ ಶಬ್ದಗಳನ್ನು ಬಳಸಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರಡಿ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಅದು ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧವಾಗಿದೆ. ಎರಡನೆಯದಾಗಿ ಅಶ್ಲೀಲ ಶಬ್ದಗಳನ್ನು ಮಾತನಾಡುವುದು ಕೂಡ ತಪ್ಪಾಗುತ್ತದೆ. ಇದು ಕೂಡ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರಡಿ ಅಪರಾಧವೆನಿಸುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com