ಬೈಕ್ ಸವಾರರೆ ಎಚ್ಚರ! ಜೂ.15ರಿಂದ ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಸಿಗಲ್ಲ

'ಹೆಲ್ಮೆಟ್ ಧರಿಸದಿದ್ದರ ಪೆಟ್ರೋಲ್ ಹಾಕಬೇಡಿ' ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖುರ್ದಾ ಜಿಲ್ಲೆಯ ಪೆಟ್ರೋಲ್ ಬಂಕ್ ಗಳು ಜೂನ್ 15ರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭುವನೇಶ್ವರ: 'ಹೆಲ್ಮೆಟ್ ಧರಿಸದಿದ್ದರ ಪೆಟ್ರೋಲ್ ಹಾಕಬೇಡಿ' ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖುರ್ದಾ ಜಿಲ್ಲೆಯ ಪೆಟ್ರೋಲ್ ಬಂಕ್ ಗಳು ಜೂನ್ 15ರಿಂದ ಜಾರಿಗೆ ತರಲು ನಿರ್ಧರಿಸಿವೆ.
ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಪೆಟ್ರೋಲ್ ಬಂಕ್ ಗಳಿಗೂ ಈ ಆದೇಶ ಅನ್ವಯಸಲಿದ್ದು, ಹೆಲ್ಮೆಟ್ ಧರಿಸದವರ ಬೈಕ್ ಗಳಿಗೆ ಇಂಧನ ಹಾಕದಂತೆ ಬಂಕ್ ಮಾಲೀಕರು ತಮ್ಮ ಸೇಲ್ಸ್ ಮನ್ ಗಳಿಗೆ ಸೂಚಿಸಬೇಕು ಮತ್ತು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಖುರ್ದಾ ಜಿಲ್ಲಾಧಿಕಾರಿ ನಿರಂಜನ್ ಸಾಹೂ ಅವರು ಹೇಳಿದ್ದಾರೆ.
ಜಿಲ್ಲಾ ರಸ್ತೆ ಸುರಕ್ಷತಾ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಹೂ, ಇಂಧನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಪೆಟ್ರೋಲ್ ಬಂಕ್ ಗಳ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು, ಈ ಸಂಬಂಧ ಇನ್ನರೆಡೂ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com