ಏಕಪಕ್ಷೀಯ ತ್ರಿವಳಿ ತಲಾಖ್‌ ಗೆ ವಿರೋಧ: 50 ಸಾವಿರ ಮುಸ್ಲಿಂ ಮಹಿಳೆಯರಿಂದ ಆನ್ ಲೈನ್ ಅರ್ಜಿಗೆ ಸಹಿ

ಏಕಪಕ್ಷೀಯ ತ್ರಿವಳಿ ತಲಾಖ್ ವಿರೋಧಿಸಿ ಭಾರತೀಯ ಮುಸ್ಲಿಂ ಮಹಿಳಾ ಆಂಧೋಲನಾ ಪ್ರಾರಂಭಿಸಿರುವ ಆನ್ ಲೈನ್ ಅರ್ಜಿಗೆ ಈ ವರೆಗೂ 50 ಸಾವಿರ ಮಹಿಳೆಯರು ಸಹಿ ಹಾಕಿದ್ದಾರೆ.
ತ್ರಿವಳಿ ತಲಾಖ್
ತ್ರಿವಳಿ ತಲಾಖ್

ನವದೆಹಲಿ: ಏಕಪಕ್ಷೀಯ ತ್ರಿವಳಿ ತಲಾಖ್ ವಿರೋಧಿಸಿ ಭಾರತೀಯ ಮುಸ್ಲಿಂ ಮಹಿಳಾ ಆಂಧೋಲನ ಪ್ರಾರಂಭಿಸಿರುವ ಆನ್ ಲೈನ್ ಅರ್ಜಿಗೆ ಈ ವರೆಗೂ 50 ಸಾವಿರ ಮಹಿಳೆಯರು ಸಹಿ ಹಾಕಿದ್ದಾರೆ.
ಆನ್ ಲೈನ್ ಅರ್ಜಿಯಲ್ಲಿ ತ್ರಿವಳಿ ತಲಾಖ್ ನ್ನು ಕುರಾನ್- ಬಾಹಿರ ಎಂದು ಹೇಳಲಾಗಿದ್ದು, ತಲಾಖ್ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಲಾಗಿದೆ. ತಲಾಖ್ ವಿರೋಧಿ ಚಳುವಳಿ ಬಗ್ಗೆ ಮಾತನಾಡಿರುವ ಭಾರತಿಯ ಮುಸ್ಲಿಂ ಮಹಿಳಾ ಆಂಧೋಲನದ ಸಹ ಸಂಸ್ಥಾಪಕಿ, ಜಾಕಿಯಾ ಸೋಮಾ, ಈ ವರೆಗೂ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ತಲಾಖ್ ನ ವಿರೋಧಿಸಿ ಆನ್ ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ, ತಲಾಖ್ ನ್ನು ರದ್ದುಗೊಳಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಏಕಪಕ್ಷೀಯ ತಲಾಖ್ ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದು ಅದನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಬೇಕೆಂದು ಮುಸ್ಲಿಂ ಸಮುದಾಯದ ಶೇ.92 ರಷ್ಟು ಮಹಿಳೆಯರು ಆಗ್ರಹಿಸುತ್ತಿದ್ದಾರೆ ಎಂದು ತಲಾಖ್ ರದ್ದತಿಗೆ ಬೆಂಬಲ ನೀಡಲು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com