ಈ ದೇವಸ್ಥಾನದಲ್ಲಿಗ ಪ್ರೇಮ ವಿವಾಹಕ್ಕೆ ನಿಷೇಧ

ಪ್ರೇಮ ವಿವಾಹಕ್ಕೆ ಹೆಸರು ವಾಸಿಯಾಗಿದ್ದ ಕರೀಂ ನಗರದ ತಪಳಾ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇದೀಗ ಪ್ರೇಮ ವಿವಾಹಗಳಿಗೆ ನಿಷೇಧದ ಫಲಕ...
ತಪಾಳ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ
ತಪಾಳ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ
Updated on
ಕರೀಂನಗರ್: ಪ್ರೇಮ ವಿವಾಹಕ್ಕೆ ಹೆಸರು ವಾಸಿಯಾಗಿದ್ದ ಕರೀಂ ನಗರದ ತಪಳಾ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇದೀಗ ಪ್ರೇಮ ವಿವಾಹಗಳಿಗೆ ನಿಷೇಧದ ಫಲಕ ಹಾಕಲಾಗಿದೆ. 
ಈ ಬೆಳವಣಿಗೆಗೆ ಕಾರಣವಾಗಿದ್ದು ಇದೇ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದ ವರನ ಹತ್ಯೆ. ಕಳೆದ ವಾರ ಮಹನ್ ಕಾಳಿ ಅನಿಲ್ ಎಂಬಾತ ಯುವತಿಯ ಪೋಷಕರ ವಿರೋಧದ ನಡುವೆಯೂ ಹಸ್ತಾಪುರಂನ ಮೋನಿಕಾ ಎಂಬುವರನ್ನು ವಿವಾಹವಾಗಿದ್ದ. ಇದಕ್ಕೆ ಕಾರಣಕ್ಕೆ ಆತನನ್ನು ಹಾಡು ಹಗಲೇ ಹತ್ಯೆ ಮಾಡಲಾಗಿತ್ತು. ಇದರಿಂದ ದೇವಸ್ಥಾನದ ಆಡಳಿತ ಮಂಡಳಿ ಇದೀಗ ದೇವಸ್ಥಾನದಲ್ಲಿ ಯಾವುದೇ ಪ್ರೇಮ ವಿವಾಹಗಳನ್ನು ಮಾಡಿಕೊಡಲಾಗುವುದಿಲ್ಲ ಎಂದು ಫಲಕವನ್ನು ಹಾಕಿದೆ. 
ಕಳೆದ ಅಕ್ಟೋಬರ್ 19ರಂದು ಅನಿಲ್ ಎಂಬುವರು ನಿಮ್ಮ ದೇವಸ್ಥಾನದಲ್ಲಿ ಪೋಷಕರ ವಿರೋಧದ ನಡುವೆ ಮೋನಿಕಾ ಎಂಬುರನ್ನು ವಿವಾಹವಾಗಿದ್ದ ಆದರೆ ಇದೀಗ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಸ್ ವೆಂಕಟ್ ರೆಡ್ಡಿಯವರು ತಿಳಿಸಿದ್ದಾರೆ. 
ಪ್ರೇಮ ವಿವಾಹದಿಂದ ಬರುವ ಹಣವೇ ಈ ದೇವಸ್ಥಾನದ ಪ್ರಮುಖ ಆದಾಯವಾಗಿತ್ತು. ಪ್ರೇಮ ವಿವಾಹವಾಗುವ ಪ್ರತಿಯೊಂದು ಜೋಡಿಯಿಂದ 5 ಸಾವಿರ ರುಪಾಯಿಯನ್ನು ಪಡೆಯಲಾಗುತ್ತಿತ್ತು. ಪ್ರೇಮಿಗಳ ದೇವಸ್ಥಾನ ಎಂದೇ ಖ್ಯಾತವಾಗಿದ್ದ ಈ ದೇವಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಜೋಡಿಗಳು ವಿವಾಹವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com