ಪಾಟ್ನಾ: ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಎನ್ ಡಿಟಿವಿಗೆ ಒಂದು ದಿನದ ನಿಷೇಧ ವಿಧಿಸಿರುವುದನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಖಂಡಿಸಿದ್ದಾರೆ.
ಯಾವುದೇ ಪ್ರಜಾಪ್ರಭುತ್ವದಲ್ಲಿ ಮುಕ್ತ ಹಾಗೂ ನಿಷ್ಪಕ್ಷಪಾತ ಮಾಧ್ಯಮಗಳು ಇರಲೇಬೇಕು, ಕೇಂದ್ರ ಸರ್ಕಾರ ಎನ್ ಡಿಟಿವಿಗೆ ನಿಷೇಧ ವಿಧಿಸಿರುವುದು ಮಾಧ್ಯಮದ ಸ್ವಾತಂತ್ರ್ಯವನ್ನು ಅತಿಕ್ರಮಣ ಮಾಡಿದಂತೆ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಎನ್ ಡಿಟಿವಿಗೆ ನಿಷೇಧ ವಿಧಿಸಿರುವ ಬಗ್ಗೆ ಇದೇ ಮೊದಲ ಬಾರಿಗೆ ಟ್ವೀಟ್ ಮೂಲಕ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೂ ಮುನ್ನ ಲಾಲು ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್ ಸಹ ಎನ್ ಡಿಟಿವಿ ನಿಷೇಧವನ್ನು ಖಂಡಿಸಿದ್ದರು.
ಜನವರಿ 2 ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದಾಗ, ಭಯೋತ್ಪಾದಕರ ವಿರುದ್ಧ ನಡೆಸಲಾಗಿದ್ದ ಕಾರ್ಯಾಚರಣೆಯ ಪ್ರಸಾರದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ಎನ್ ಡಿಟಿವಿಗೆ ಕೇಂದ್ರ ಸರ್ಕಾರ ಒಂದು ದಿನದ ನಿಷೇಧ ವಿಧಿಸಿದೆ.