500, 1000 ನೋಟುಗಳ ಬದಲಾವಣೆ ಹೇಗೆ?: ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮ ಬಳಿ ಇರುವ 500, 1000 ರೂ ನೋಟುಗಳನ್ನು ನವೆಂಬರ್ 10 ರಿಂದ ಡಿಸೆಂಬರ್ 30 ರೊಳಗೆ(50 ದಿನಗ ಒಳಗಾಗಿ) ಸ್ಥಳೀಯ ಬ್ಯಾಂಕ್ ಗಳಲ್ಲಿ ಠೇವಣಿ ಮಾಡಿ...
500, 1000 ರೂ ನೋಟುಗಳು
500, 1000 ರೂ ನೋಟುಗಳು
Updated on
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಕಪ್ಪುಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಕಪ್ಪುಹಣ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವುದು ದಿಟ್ಟ ನಿರ್ಧಾರವಾಗಿದೆಯಾದರೂ, ಪ್ರಾರಂಭದಲ್ಲಿ ಈ ನಿರ್ಧಾರದಿಂದ ಜನಸಾಮಾನ್ಯರು ಗಲಿಬಿಲಿಗೊಂಡಿದ್ದಾರೆ. 
ಕಪ್ಪುಹಣ ಘೋಷಿಸಿಕೊಳ್ಳದೇ ಇರುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಆತಂಕ ಎದುರಾಗಿದ್ದರೆ, ತನ್ನ ಬಳಿ ಇರುವ ಕೆಲವೇ 500, 1000 ರೂ ನೋಟುಗಳನ್ನು ಬದಲಾಯಿಸಿಕೊಳ್ಳುವುದು ಹೇಗೆ ಎಂಬುದು ಮಧ್ಯಮ ವರ್ಗದ ಜನರನ್ನು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆಯಾಗಿದೆ. 
500, 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ
  • ನಿಮ್ಮ ಬಳಿ ಇರುವ 500, 1000  ರೂ ನೋಟುಗಳನ್ನು ನವೆಂಬರ್ 10 ರಿಂದ ಡಿಸೆಂಬರ್ 30 ರೊಳಗೆ(50 ದಿನಗ ಒಳಗಾಗಿ) ಸ್ಥಳೀಯ ಬ್ಯಾಂಕ್ ಗಳಲ್ಲಿ ಠೇವಣಿ ಮಾಡಿ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು).  

  • ಹಳೆಯ ನೋಟುಗಳನ್ನು ರೈಲು ಪ್ರಯಾಣ, ವಿಮಾನ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಲು, ಆಸ್ಪತ್ರೆ, ಪೆಟ್ರೋಲ್, ಡೀಸೆಲ್, ಸಿಎನ್ ಜಿ ಕೇಂದ್ರ, ಹಾಲಿನ ಕೇಂದ್ರ, ಸಹಕಾರಿ ಸಂಘಗಳಲ್ಲಿ ಬಳಕೆ ಮಾಡಲು 72 ಗಂಟೆಗಳ ವರೆಗೆ ಅವಕಾಶ ಇರಲಿದೆ. 

  • ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ ನ.9 ರಂದು ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡುವುದಿಲ್ಲ. ಆದರೆ ಪ್ರತಿ ದಿನ 10,000, ಪ್ರತಿವಾರ 20,000 ದಂತೆ ಹಣ ಡ್ರಾ ಮಾಡಲು ಅವಕಾಶವಿದೆ. ಹಂತ ಹಂತವಾಗಿ ಈ ಮಿತಿಯನ್ನು ಏರಿಕೆ ಮಾಡಲಾಗುತ್ತದೆ. 

  • ಇಂಟರ್ ನೆಟ್ ಬ್ಯಾಂಕಿಂಗ್, ಆನ್ ಲೈನ್ ಶಾಪಿಂಗ್, ಸೇರಿದಂತೆ ಎಲೆಕ್ಟ್ರಾನಿಕ್ ಮೋಡ್ ಮೂಲಕ ವಹಿವಾಟು ನಡೆಸುವವರಿಗೆ ಯಾವುದೇ ನಿರ್ಬಂಧ, ಸಮಸ್ಯೆ ಇರುವುದಿಲ್ಲ. ಅಷ್ಟೇ ಅಲ್ಲದೇ ಕ್ಯಾಶ್ ಹೊರತಾಗಿ ಡಿಡಿ, ಚೆಕ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕವೂ ವ್ಯಾಪಾರ ವಹಿವಾಟು ನಡೆಸಬಹುದು. 

  • ಇನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಬಳಿ ಇರುವ 500, 1000 ನೋಟುಗಳನ್ನು 5,000 ರೂ ಪಾಯಿ ವರೆಗೆ ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

  • ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಗುರುತಿನ ಚೀಟಿ ತೋರಿಸುವ ಮೂಲಕ ಸಾರ್ವಜನಿಕರು ಸುಲಭವಾಗಿ 500, 1000 ರೂ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

  • ಎಟಿಎಂ ಗಳು ಕೆಲಸ ಮಾಡಲು ಪ್ರಾರಂಭಿಸಿದ ನಂತರ ಪ್ರತಿ ಕಾರ್ಡ್ ಗೆ ಹಣ ತೆಗೆಯುವ ಮಿತಿಯನ್ನು ಸದ್ಯಕ್ಕೆ 2000 ರೂ ಗಳಷ್ಟು ನಿಗದಿಪಡಿಸಲಾಗಿದೆ, ನಂತರ 4000 ಕ್ಕೆ ಏರಿಕೆ ಮಾಡಲಾಗುತ್ತದೆ.

  • 500, 1000 ರೂ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಕೇಂದ್ರ ಸರ್ಕಾರ ನಿಗದಿಪಡಿಸುವ ಗಡುವನ್ನು (ಡಿಸೆಂಬರ್ 30) ಒಂದು ವೇಳೆ ಮೀರಿದರೆ, ಆಗಲೂ ಸಹ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವ ಅವಕಾಶ ಇರಲಿದೆ. ಆದರೆ ಅದಕ್ಕಾಗಿ ಸಾರ್ವಜನಿಕರು ಆರ್ ಬಿಐ ನ ಅಧಿಕೃತ ಅಧಿಕಾರಿಗಳನ್ನು ಸಂಪರ್ಕಿಸಿ ಗುರುತಿನ ಚೀಟಿಯೊಂದಿಗೆ ಘೋಷಣಾ ಪತ್ರವನ್ನು ನೀಡಿ ಹೊಸ ನೋಟುಗಳನ್ನು ಪಡೆಯಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com