ಕಡಿಮೆ ಮುಖಬೆಲೆಯ ಕರೆನ್ಸಿ ಕೊರತೆ: ರೈಲು ಟಿಕೆಟ್ ರದ್ದತಿಗೆ ನಗದು ಮರುಪಾವತಿ ಸ್ಥಗಿತ!

500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದರಿಂದ ಕಡಿಮೆ ಮುಖಬೆಲೆಯ ರೂಪಾಯಿ ನೋಟುಗಳ ಕೊರತೆ ಎದುರಾಗಿದ್ದು, ರೈಲು ನಿಲ್ದಾಣಗಳಲ್ಲಿ ಟಿಕೆಟ್ ರದ್ದತಿ ಮಾಡುವವರಿಗೆ ನಗದು ಮರುಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಡಿಮೆ ಮುಖಬೆಲೆಯ ಕರೆನ್ಸಿ ಕೊರತೆ: ರೈಲು ಟಿಕೆಟ್ ರದ್ದತಿಗೆ ನಗದು ಮರುಪಾವತಿ ಸ್ಥಗಿತ!
ಕಡಿಮೆ ಮುಖಬೆಲೆಯ ಕರೆನ್ಸಿ ಕೊರತೆ: ರೈಲು ಟಿಕೆಟ್ ರದ್ದತಿಗೆ ನಗದು ಮರುಪಾವತಿ ಸ್ಥಗಿತ!
ನವದೆಹಲಿ: 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದರಿಂದ ಕಡಿಮೆ ಮುಖಬೆಲೆಯ ರೂಪಾಯಿ ನೋಟುಗಳ ಕೊರತೆ ಎದುರಾಗಿದ್ದು, ರೈಲು ನಿಲ್ದಾಣಗಳಲ್ಲಿ ಟಿಕೆಟ್ ರದ್ದತಿ ಮಾಡುವವರಿಗೆ ನಗದು ಮರುಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 
ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರಿಗೆ ನಗದನ್ನು ಮರುಪಾವತಿ ಮಾಡುವ ಬದಲು ಟಿಕೆಟ್ ಠೇವಣಿ ರಸೀದಿ(ಟಿಡಿಆರ್)ನ್ನು ನೀಡಲಾಗುತ್ತಿದೆ. ಒಂದು ವೇಳೆ 10 ಸಾವಿರ ಅಥವಾ ಅದಕ್ಕಿಂತ ಮೇಲ್ಪಟ್ಟ ಮೊತ್ತದ ಟಿಕೆಟ್ ಗಳನ್ನು ರದ್ದುಗೊಳಿಸಿದರೆ, ಹಣವನ್ನು ನೇರವಾಗಿ ಪ್ರಯಾಣಿಕರ ಬ್ಯಾಂಕ್ ಖಾತೆಗೇ ವರ್ಗಾಯಿಸಲಾಗುತ್ತದೆ. ಆದರೆ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಬೇಕಾದರೆ ಬ್ಯಾಂಕ್ ಖಾತೆ ಮಾಹಿತಿಯನ್ನು ನೀಡಬೇಕಾಗುತ್ತದೆ 
ರೈಲು ನಿಲ್ದಾಣಗಳಲ್ಲಿ ಟಿಕೆಟ್ ಕಾಯ್ದಿರಿಸುವುದಕ್ಕೆ 500, 1000 ರೂ ಗಳ ನೋಟುಗಳನ್ನು ಬಳಕೆ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕಡಿಮೆ ಮುಖಬೆಲೆಯ ಕರೆನ್ಸಿ ಕೊರತೆ ಎದುರಾಗಿದೆ. ಆದ್ದರಿಂದ ಟಿಡಿಆರ್ ನ್ನು ನೀಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com