ಟ್ವಿಟರ್ ಕೌಂಟರ್ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ದುಬಾರಿ ಮೊತ್ತದ ಮುಖಬೆಲೆ ನೋಟುಗಳನ್ನು ರದ್ದುಗೊಸಿದ ನಿರ್ಧಾರ ಪ್ರಕಟಿಸಿದ ನಂತರ ಈ ವರೆಗೂ 3,13,312 ಅನುಯಾಯಿಗಳು ಮೋದಿ ಅವರನ್ನು ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂದು ಹೇಳಿದೆ. ಆದರೆ ಇದಕ್ಕೆ ಪ್ರತಿಯಾಗಿ 4,30,128 ಜನರು ಪ್ರಧಾನಿ ಮೋದಿ ಅವರ ಅನುಯಾಯಿಗಳಾಗಿದ್ದಾರೆ. ಆದರೆ ಇದು ತಾಂತ್ರಿಕ ದೋಷದಿಂದಾಗಿ ಉಂಟಾದ ಏರಿಳಿತವೊ ಅಥವಾ ನೋಟ್ ಗಳನ್ನು ಬಂದ್ ಮಾಡಿದ ನಿರ್ಧಾರದಿಂದ ಉಂಟಾದ ಏರಿಳಿತವೋ ಎಂಬುದು ತಿಳಿದುಬಂದಿಲ್ಲ.