ಮಿರ್ಜಾಪುರ: ದೇಶಾದ್ಯಂತ 500-1000 ರುಪಾಯಿ ನೋಟುಗಳು ರದ್ದಾದ ನಂತರ ಇದೀಗ ಅಕ್ರಮವಾಗಿ ಮುಚ್ಚಿಟ್ಟಿದ್ದ ಹಣವನ್ನು ಏನು ಮಾಡಬೇಕೆಂದು ತೋಚದೆ ಉತ್ತರಪ್ರದೇಶದಲ್ಲಿ ಗಂಗಾನದಿಯಲ್ಲಿ ತೇಲಿ ಬಿಟ್ಟಿದ್ದಾರೆ. .ಉತ್ತರಪ್ರದೇಶ ಮಿರ್ಜಾಪುರ ಬಳಿ ಗಂಗಾನದಿಯಲ್ಲಿ ತೆಪ್ಪಯೊಂದರಲ್ಲಿ ಕಂತೆ ಕಂತೆ 500-1000 ರುಪಾಯಿ ನೋಟುಗಳು ತೇಲಿಬಂದಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. .ನೋಟುಗಳಿಂದ ತೆಪ್ಪವನ್ನು ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಹಣವನ್ನು ವಶಕ್ಕೆ ಪಡೆದಿದ್ದಾರೆ. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics