
ಶಿಮ್ಲಾ: ಪರ್ವತದ ಮೇಲಿಂದ ವಾಹನ ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ 7 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಶಿಮ್ಲಾದ ಕರಗ ಎಂಬಲ್ಲಿ ನಡೆದಿದೆ.
ಹೊಸದಾಗಿ ಖರೀದಿಸಿದ್ದ ವಾಹನದಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. ಮಂಡಿ ಜಿಲ್ಲೆಯ ರೇವಲ್ಸರ್ ನಿಂದ ಚಂಬಾ ಜಿಲ್ಲೆಯ ಪಂಗಿ ಟ್ರೈಬಲ್ ವ್ಯಾಲಿಗೆ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಜಾವ 4.15 ಕ್ಕೆ ಕೆಯ್ಲಾಂಗ್- ಉದಯ್ ಪುರ ರಸ್ತೆಯಲ್ಲಿ ತಿರುವನ್ನು ನಿಯಂತ್ರಿಸಲಾಗದೇ ಸುಮಾರು 129 ಅಡಿ ಕೆಳಗೆ ವಾಹನ ಬಿದ್ದಿದೆ.
ಐವರು ಸ್ಥಳದಲ್ಲೇ ಸಾವನ್ನಪ್ಪಿ, ಉಳಿದ 7 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ, ಶವಗಳನ್ನು ಹೊರ ತೆಗೆದಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement