ಜನ್ ಧನ್ ಖಾತೆಗಳಲ್ಲಿ ಏಕಾಏಕಿ ಬೃಹತ್ ಪ್ರಮಾಣದ ಹಣ : ಜಾರಿ ನಿರ್ದೇಶನಾಲಯದಿಂದ ಪರಿಶೀಲನೆ

500, 1000 ರೂಗಳ ನೋಟುಗಳನ್ನು ಬಂದ್ ಮಾಡಿದ ಕೇವಲ 2-3 ದಿನಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹಣ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಹರಿದುಬಂದಿದೆ.
ಜನ್ ಧನ್ ಖಾತೆಗಳಲ್ಲಿ ಏಕಾಏಕಿ ಹಣ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಪರಿಶೀಲನೆ
ಜನ್ ಧನ್ ಖಾತೆಗಳಲ್ಲಿ ಏಕಾಏಕಿ ಹಣ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಪರಿಶೀಲನೆ
ನವದೆಹಲಿ: 500, 1000 ರೂಗಳ ನೋಟುಗಳನ್ನು ಬಂದ್ ಮಾಡಿದ ಕೇವಲ 2-3 ದಿನಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹಣ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಹರಿದುಬಂದಿದೆ. ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಹಣ ಜಮಾವಣೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ್ ಧನ್ ಖಾತೆಗಳ ಮೇಲೆ ನಿಗಾವಹಿಸಿದೆ. 
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಿರೋ ಬ್ಯಾಲೆನ್ಸ್ ಗಳ ಜನ್ ಧನ್ ಖಾತೆಗಳನ್ನು ಬಳಸಿಕೊಂಡು ಅಕ್ರಮ ಕರೆನ್ಸಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜನ್ ಧನ್ ಖಾತೆಗಳ ಮೇಲೂ ನಿಗಾ ವಹಿಸಲಿದೆ ಎಂದು ತಿಳಿಸಿದ್ದಾರೆ. 
ಇನ್ನು ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುತ್ತಿರುವ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. " ಜನ್ ಧನ್ ಖಾತೆಗಳಲ್ಲಿ ಏಕಾಏಕಿ ಹಣ ತುಂಬುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ, ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಜನ್ ಧನ್ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟಲು ಸಂಬಂಧಿಸಿದ ಇಲಾಖೆ ಜನ್ ಧನ್ ಖಾತೆಗಳನ್ನು ಪರಿಶೀಲಿಸುತ್ತಿವೆ, ಇದರೊಂದಿಗೆ 67 ವಿದೇಶಿ ವಿನಿಮಯ ಡೀಲರ್ ಗಳ ಮೇಲೂ ಸಹ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com