ಆಮ್ ಆದ್ಮಿ ಪಕ್ಷಕ್ಕೆ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ಸೇರ್ಪಡೆ

ಬಿಜೆಪಿಯಿಂದ ಅಮಾನತುಗೊಂಡಿರುವ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ನ.13 ರಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ಸೇರ್ಪಡೆ
ಆಮ್ ಆದ್ಮಿ ಪಕ್ಷಕ್ಕೆ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ಸೇರ್ಪಡೆ
ನವದೆಹಲಿ: ಬಿಜೆಪಿಯಿಂದ ಅಮಾನತುಗೊಂಡಿರುವ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಆಜಾದ್ ನ.13 ರಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ಆಮ್ ಆದ್ಮಿ ಪಕ್ಷಕ್ಕೆ ಭವಿಷ್ಯ ಇರುವುದರಿಂದ ಸೇರ್ಪಡೆಗೊಂಡಿದ್ದೇನೆ ಎಂದು ಪೂನಂ ಆಜಾದ್ ಹೇಳಿಕೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಪ್ರಮುಖ ಕಾರಣ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆಗಿದ್ದು, ಅವರಿಂದ ಹೆಚ್ಚು ಶೋಷಣೆಗೊಳಗಾಗಿದ್ದೇವೆ ಎಂದು ಪೂನಂ ಆಜಾದ್ ಆರೋಪಿಸಿದ್ದಾರೆ. 
ನನ್ನ ಪತಿ ಕೀರ್ತಿ ಆಜಾದ್ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯತ್ನಿಸಿದರು. ಆದರೆ ಅವರನ್ನು ಬಿಜೆಪಿಯಿಂದ ಕಿತ್ತೊಗೆಯಲಾಯಿತು ಎಂದು ಕೀರ್ತಿ ಆಜಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿ ಹಾಗೂ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಲ್ಲಿ ಅರುಣ್ ಜೇಟ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಹಾರದ ಸಂಸದ ಕೀರ್ತಿ ಆಜಾದ್ ಅರುಣ್ ಜೇಟ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನ ಕೀರ್ತಿ ಆಜಾದ್ ದೆಹಲಿ ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com