ಭಾರತೀಯ ಭದ್ರತಾ ಮುದ್ರಣ ಮತ್ತು ಸಂಪಾದನಾ ಸಂಸ್ಥೆಯ ಭಾಗವಾಗಿರುವ ಸಿಎನ್ ಪಿ, ರೂ. 20, 50, 100 ಗಳ ನೋಟುಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಮುದ್ರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ರದ್ದುಗೊಳಿಸಿ, 2000 ರೂ ನೋಟುಗಳನ್ನು ಪರಿಚಯಿಸಿತ್ತು. 2000 ರೂ ಮುಖಬೆಲೆಯ ನೋಟುಗಳು ಸಿಗುತ್ತಿವೆಯಾದರೂ 500 ರೂ ಮುಖಬೆಲೆಯ ಹೊಸ ನೋಟುಗಳು ಈ ವರೆಗೂ ಜನರ ಕೈಗೆ ತಲುಪಿಲ್ಲ. ಮೈಸೂರು, ಪಶ್ಚಿಮ ಬಂಗಾಳಗಳಲ್ಲಿ ಈಗಾಗಲೇ ಆರ್ ಬಿಐ 2000, 500 ರೂ ನೋಟುಗಳನ್ನು ಮುದ್ರಿಸಿದೆ. 500 ರೂ ಹೊಸ ನೋಟುಗಳನ್ನು ಭಾರತೀಯ ಭದ್ರತಾ ಮುದ್ರಣ ಮತ್ತು ಸಂಪಾದನಾ ಸಂಸ್ಥೆಯ ನಾಸಿಕ್ ಹಾಗೂ ಮಧ್ಯಪ್ರದೇಶದ ದೇವಾಸ್ ನ ಪ್ರೆಸ್ ನಲ್ಲಿ ಮುದ್ರಿಸಲಾಗಿದ್ದು ಒಟ್ಟು 400 ಮಿಲಿಯನ್ ನಷ್ಟು 500 ರೂ ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಸೂಚನೆ ನೀಡಲಾಗಿದೆ.