ನೋಟುಗಳ ನಿಷೇಧ: ದೇಶಕ್ಕಿಂತ ಯಾವುದು ದೊಡ್ಡದಲ್ಲ; ಬಾಬಾ ರಾಮ್‌ದೇವ್

500 ಮತ್ತು 1000 ಸಾವಿರ ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿಷೇಧಿಸಿದ್ದನ್ನು ಬೆಂಬಲಿಸಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು...
ರಾಮ್ ದೇವ್
ರಾಮ್ ದೇವ್
Updated on
ನವದೆಹಲಿ: 500 ಮತ್ತು 1000 ಸಾವಿರ ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿಷೇಧಿಸಿದ್ದನ್ನು ಬೆಂಬಲಿಸಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು ಇದೀಗ ದೇಶಕ್ಕಿಂತ ಯಾವುದು ದೊಡ್ಡದಲ್ಲ ಎಂದು ಮತ್ತೆ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 
ಭ್ರಷ್ಟಾಚಾರ, ಕಪ್ಪುಹಣ, ನಕಲಿ ಹಣ ಹಾಗೂ ಉಗ್ರವಾದವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ. ಸದ್ಯ ನೋಟುಗಳ ನಿಷೇಧದ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತಿದ್ದು ಇದು ತಾತ್ಕಾಲಿಕ ಸಮಸ್ಯೆ. ಯುದ್ಧ ನಡೆಯುವ ಸಂದರ್ಭದಲ್ಲಿ ಯೋಧರು ವಾರಗಳ ಕಾಲ ಊಟ ನಿದ್ದೆಯಿಲ್ಲದೆ ಹೋರಾಟ ನಡೆಸುತ್ತಾರೆ ಹೀಗಿರುವಾಗ ನಮ್ಮಿಂದ ಸಣ್ಣ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
ಜನರ ಸಮಸ್ಯೆ ನಿವಾರಣೆಗಾಗಿ ನವೆಂಬರ್ 14ರವರೆಗೆ ಹಳೆ 500-1000 ನೋಟುಗಳನ್ನು ಚಲಾಯಿಸುವ ಅವಕಾಶ ನೀಡಲಾಗಿದೆ. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಸಾಕಷ್ಟು ಹಣವಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್ ಗಳ ಶಾಖೆಗಳಲ್ಲಿ ಹಾಗೂ ಎಟಿಎಂ ಯಂತ್ರಗಳಲ್ಲಿ ದೊರಕುವ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com