ಹಳೇ ನೋಟು ವಿನಿಮಯಕ್ಕೆ ಗ್ರಾಹಕರು ಗುರುತುಪತ್ರದ ಫೋಟೋ ಕಾಪಿ ಕೊಡಬೇಕಿಲ್ಲ: ಆರ್‌ಬಿಐ

ಬ್ಯಾಂಕುಗಳಲ್ಲಿ ನಿಷೇಧಿತ 500-1000 ನೋಟುಗಳ ವಿನಿಮಯಿಸಿಕೊಳ್ಳುವಾಗ ಗ್ರಾಹಕರು ತಮ್ಮ ಗುರುತು ಪತ್ರದ ಫೋಟೋ ಕಾಪಿ ನೀಡಬೇಕಾಗಿಲ್ಲ ಎಂದು ರಾಷ್ಟ್ರೀಯ...
ಹಳೇ ನೋಟು ವಿನಿಮಯಕ್ಕೆ ಸಾಲು ನಿಂತಿರುವ ಗ್ರಾಹಕರು
ಹಳೇ ನೋಟು ವಿನಿಮಯಕ್ಕೆ ಸಾಲು ನಿಂತಿರುವ ಗ್ರಾಹಕರು
ನವದೆಹಲಿ: ಬ್ಯಾಂಕುಗಳಲ್ಲಿ ನಿಷೇಧಿತ 500-1000 ನೋಟುಗಳ ವಿನಿಮಯಿಸಿಕೊಳ್ಳುವಾಗ ಗ್ರಾಹಕರು ತಮ್ಮ ಗುರುತು ಪತ್ರದ ಫೋಟೋ ಕಾಪಿ ನೀಡಬೇಕಾಗಿಲ್ಲ ಎಂದು ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಹೇಳಿದೆ. 
ಹಳೇ ನೋಟುಗಳ ವಿನಿಮಯ ಮಾಡುವಾಗ ಗ್ರಾಹಕರಿಂದ ಬ್ಯಾಂಕ್ ಶಾಖೆಗಳು ಅವರ ಗುರುತು ಪತ್ರದ ಫೋಟೋ ಕಾಪಿಯನ್ನು ಕಡ್ಡಾಯವಾಗಿ ಕೇಳಿರುವುದು ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ಬಿಐ ತಮ್ಮ ಗುರುತು ಪತ್ರವನ್ನು ತೋರಿಸಿದರಷ್ಟೇ ಸಾಕು ಎಂದು ಹೇಳಿದೆ. 
ಬ್ಯಾಂಕಿಗೆ ಬೇಕಿರುವುದು ನೋಟು ವಿನಿಮಯ ಮಾಡಿಕೊಳ್ಳುವ ಗ್ರಾಹಕರ ಗುರುತು ಪತ್ರದಲ್ಲಿನ ನಂಬರ್ ಮಾತ್ರ ಎಂದು ಎಸ್ಬಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಗ್ರಾಹಕರ ಗುರುತು ಪತ್ರದ ಫೋಟೋ ಕಾಪಿಗಳನ್ನು ಹಲವು ಬ್ಯಾಂಕ್ ಗಳು ಕಡ್ಡಾಯ ಮಾಡಿರುವುದರಿಂದಲೇ ಬ್ಯಾಂಕ್ ಗಳ ಮುಂದೆ ಕ್ಯೂ ಬೆಳೆಯಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com