ಎಸ್ ಬಿಐ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಮನ್ನಾ ಮಾಡಿಲ್ಲ ಬದಲಾಗಿ, ಈ ಎಲ್ಲಾ ಖಾತೆಗಳನ್ನು ದುಡಿಯದ ಬಂಡವಾಳ ಎಂದು ಲೆಕ್ಕ ಪುಸ್ತಕದಲ್ಲಿ ಬರೆದಿಡಲಾಗಿದೆ. ಆದರೆ ಇದರಿಂದ ಸಾಲ ಮನ್ನಾ ಮಾಡಿದಂತೆ ಆಗುವುದಿಲ್ಲ ಸಾಲಗಾರರಿಂದ ಸಾಲ ವಸೂಲಿ ಮಾಡುವ ಹಕ್ಕು ಬ್ಯಾಂಕ್ ಗಳಿಗೆ ಇದೆ. ಮಲ್ಯ ವಿರುದ್ಧದ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಜೇಟ್ಲಿ ರಾಜ್ಯಸಭೆಗೆ ತಿಳಿಸಿದರು.