ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ!

ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಅಹ್ಮರ್ ಮುಸ್ತಿಖಾನ್ ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ!
ನವದೆಹಲಿ: ಕಿಡ್ನಿ ವೈಫಲ್ಯದಿಂದ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಅಹ್ಮರ್ ಮುಸ್ತಿಖಾನ್ ಹೇಳಿದ್ದಾರೆ. 
ಸುಷ್ಮಾ ಸ್ವರಾಜ್ ಅವರ ಅನಾರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಅಹ್ಮರ್ ಮುಸ್ತಿಖಾನ್, ಬಲೂಚ್ ನ ನಾಗರಿಕನ ಕಿಡ್ನಿ ಸುಷ್ಮಾ ಸ್ವರಾಜ್ ಅವರಿಗೆ ಹೊಂದಾಣಿಕೆಯಾಗುವುದಿದ್ದರೆ, ನನ್ನ ಸಹೋದರಿಗೆ ನನ್ನ ಕಿಡ್ನಿ ನೀಡಲು ಸಿದ್ಧ ಎಂದು ಹೇಳಿದ್ದಾರೆ. 
ಎಂಡೋಕ್ರಾನಿಕಲ್ ಪರೀಕ್ಷೆಗಳಿಗಾಗಿ ನವೆಂಬರ್ 7 ರಂದು ಸುಷ್ಮಾ ಸ್ವರಾಜ್ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು. "ಸುಷ್ಮಾ ಅವರಿಗೆ ಡಯಾಬೆಟಿಸ್ ತೊಂದರೆ ಇದೆ ಆದುದರಿಂದ ಅವರ ಕಿಡ್ನಿಗೆ ತೊಂದರೆಯಾಗಿದೆ. ಅವರು ಈಗ ಡಯಾಲಿಸಿಸ್ ಗೆ ಒಳಗಾಗಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ" ಎಂದು ಎಐಐಎಂಎಸ್ ವೈದ್ಯರು ಹೇಳಿದ್ದಾರೆ.  ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ಅಗತ್ಯವಿದ್ದರೆ ತಮ್ಮ ಕಿಡ್ನಿಯನ್ನು ನೀಡಲು ಸಿದ್ಧ ಎಂದು ಹೇಳಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಅಹ್ಮರ್ ಮುಸ್ತಿಖಾನ್, ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದ ಪರವಾಗಿ ಭಾರತ ಮಧ್ಯಪ್ರವೇಶಿಸಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬಲೂಚ್ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದ ಮೊದಲ ವ್ಯಕ್ತಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com