1000 ಮುಖಬೆಲೆಯ ನೋಟುಗಳ ಮರು ಚಲಾವಣೆ ಇಲ್ಲ: ಅರುಣ್ ಜೇಟ್ಲಿ

1000 ಮುಖ ಬೆಲೆಯ ನೋಟುಗಳನ್ನು ಮರು ಚಲಾವಣೆ ಮಾಡುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: 1000 ಮುಖ ಬೆಲೆಯ ನೋಟುಗಳನ್ನು ಮರು ಚಲಾವಣೆ ಮಾಡುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. 
ನಿಷೇಧಿತ 500-1000 ಮುಖಬೆಲೆಯ ನೋಟುಗಳನ್ನು ನೀಡಿ 4500 ರುಪಾಯಿ ವಿನಿಮಯ ಮಾಡಿಕೊಳ್ಳುವುದರಿಂದ ಹಣ ದುರುಪಯೋಗ ಸ್ಧಗಿತಗೊಳಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ದಿನಗಳಲ್ಲಿ 1000 ನೋಟುಗಳ ಮರು ಚಲಾವಣೆ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪ್ರಸ್ತುತ 22,500 ಎಟಿಎಂಗಳನ್ನು ಮರು ಮಾಪನಾಂಕ ಮಾಡಲಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದರು. 
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಇಲಾಖೆ ಕಾರ್ಯದರ್ಶಿ ಶಶಿಕಾಂತ್ ದಾಸ್ ಸದ್ಯ 500-1000 ಮುಖಬೆಲೆಯ ನೋಟುಗಳ ಚಲಾವಣೆ ಹಿಂತೆಗೆದಿರುವುದರಿಂದ ಉಂಟಾಗಿರುವ ಹಣಕಾಸು ವ್ಯವಹಾರಗಳ ತೊಂದರೆ ನಿವಾರಣೆಗೆ ಹಲವು ಬದಲಾವಣೆ ಮಾಡಿಕೊಳ್ಳಲು ಕೇಂದ್ರ ತೀರ್ಮಾನಿಸಿದೆ. ಅದರಂತೆ ರೈತರು ಕೃಷಿಸಾಲ ಖಾತೆಯಿಂದ 25 ಸಾವಿರ ಪಡೆಯಬಹುದು. ಕೃಷಿ ಉತ್ಪನ್ನ ವ್ಯಾಪಾರಗಳಿಗೆ 50 ಸಾವಿರ ತೆಗೆಯಬಹುದು. ಮದುವೆಗೆ 2.5 ಲಕ್ಷವರೆಗಿನ ಮೊತ್ತವನ್ನು ಬ್ಯಾಂಕ್ ಖಾತೆಗಳಿಂದ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿ ನಿಯಮಗಳನ್ನು ಮಾರ್ಪಾಡು ಮಾಡಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com