ಬಿಲ್ ಗೇಟ್ಸ್
ದೇಶ
ದುಬಾರಿ ಬೆಲೆಯ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ನ ಸ್ಥಾಪಕ ಬಿಲ್ ಗೇಟ್ಸ್ ಸಹ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ್ದಾರೆ.
500, 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ವಿದೇಶಿ ಆರ್ಥಿಕ ತಜ್ಞರು, ಉದ್ಯಮಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮೈಕ್ರೋಸಾಫ್ಟ್ ನ ಸ್ಥಾಪಕ ಬಿಲ್ ಗೇಟ್ಸ್ ಸಹ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ್ದಾರೆ.
ನೀತಿ ಆಯೋಗ ಆಯೋಜಿಸಿದ್ದ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಲ್ ಗೇಟ್ಸ್, ಡಿಜಿಟಲ್ ವಹಿವಾಟು ನಡೆಸುವುದರಿಂದ ಪಾರದರ್ಶಕತೆ ಹಾಗೂ ಕಪ್ಪುಹಣವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಬಗ್ಗೆಯೂ ಮಾತನಾಡಿರುವ ಬಿಲ್ ಗೇಟ್ಸ್, ಕೇಂದ್ರ ಸರ್ಕಾರದ ದಿಟ್ಟ ನಡೆ ಭಾರತದ ಕಪ್ಪು ಹಣದ ಆರ್ಥಿಕತೆಗೆ ಅಂತ್ಯ ಹಾಡಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
500, 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ, ಹೊಸ ನೋಟುಗಳನ್ನು ಪರಿಚಯಿಸಿರುವ ಪ್ರಧಾನಿಯವರ ಕ್ರಮ ಕಪ್ಪು ಹಣವನ್ನು ನಿಯಂತ್ರಿಸಲು ನೆರವಾಗಲಿದೆ, ಅಂತೆಯೇ ಭಾರತ ಡಿಜಿಟಲ್ ಆರ್ಥಿಕ ತೆಗೆ ಸೇರ್ಪಡೆಯಾಗುವ ಬಲವಾದ ದೃಷ್ಟಿ ಹೊಂದಿದ್ದು, ಆಧಾರ್ ಕಾರ್ಡ್ ಈ ನಿಟ್ಟಿನಲ್ಲಿ ನೆರವಾಗಲಿದೆ ಎಂದು ಬಿಲಿಗೇಟ್ಸ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ