500, 1000 ನೋಟು ನಿಷೇಧ: ದತ್ತಿ, ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ಇಲಾಖೆ ನೊಟೀಸ್

ತೆರಿಗೆ ವಿನಾಯ್ತಿ ಪಡೆಯುತ್ತಿರುವ ನೂರಾರು ದತ್ತಿ ಮತ್ತು ಧಾರ್ಮಿಕ ಸಂಸ್ಥೆಗಳು, ಕೇಂದ್ರ ಸರ್ಕಾರ ಹಳೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೆರಿಗೆ ವಿನಾಯ್ತಿ ಪಡೆಯುತ್ತಿರುವ ನೂರಾರು ದತ್ತಿ ಮತ್ತು ಧಾರ್ಮಿಕ ಸಂಸ್ಥೆಗಳು, ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ನಿಷೇಧ ಮಾಡಿದ ದಿನದವರೆಗಿನ ಹಣದ ಲೆಕ್ಕಪತ್ರ ತೋರಿಸುವಂತೆ ಆದಾಯ ತೆರಿಗೆ ಇಲಾಖೆ ನೊಟೀಸು ಜಾರಿ ಮಾಡಿದೆ.
ಕಪ್ಪು ಹಣವನ್ನು ಧಾರ್ಮಿಕ ದತ್ತಿ ಹಾಗೂ ಸಂಸ್ಥೆಗಳಲ್ಲಿ ದಾನ ಮಾಡುವ ಸಾಧ್ಯತೆಯಿರುವುದರಿಂದ ಇಲಾಖೆ ನೊಟೀಸ್ ಜಾರಿ ಮಾಡಿದೆ. ಹೀಗೆ ತೆರಿಗೆ ವಿನಾಯ್ತಿ ಪಡೆಯುತ್ತಿರುವ ನೂರಾರು ಇಂತಹ ಧಾರ್ಮಿಕ ದತ್ತಿ ಕೇಂದ್ರಗಳಿಗೆ, ಸರ್ಕಾರೇತರ ಸಂಘಟನೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನೊಟೀಸ್ ಹೊರಡಿಸಲಾಗಿದ್ದು, ಈ ಮೂಲಕ ಕಪ್ಪು ಹಣ ಸಂಗ್ರಹಕ್ಕೆ ಕಡಿವಾಣ ಹಾಕಲು ತೆರಿಗೆ ಇಲಾಖೆ ಮುಂದಾಗಿದೆ.
ಇಂತಹ ಧಾರ್ಮಿಕ ಸಂಸ್ಥೆಗಳು ಮಾರ್ಚ್ 31ರಿಂದ ನವೆಂಬರ್ 8ರವರೆಗಿನ ದಾಖಲೆಗಳನ್ನು ನೀಡುವಂತೆ ಇಲಾಖೆ ಆದೇಶ ನೀಡಿದೆ. ಡಿಸೆಂಬರ್ 30ರ ನಂತರ ಇಲಾಖೆ ಈ ದಾಖಲೆಗಳನ್ನು ಪರಿಶೀಲಿಸಿ ವರದಿಗಳನ್ನು ಕಳುಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com