ಕಪ್ಪು ಹಣವನ್ನು ಬಿಳಿ ಮಾಡಲು ಹವಾಲಾ ಏಜೆಂಟರ ಬಳಿ ಹೊಸ ದಾರಿಗಳು

500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದಿಂದ ಕಪ್ಪು ಹಣವನ್ನು ಸಕ್ರಮಗೊಳಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಚ್ಚಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದಿಂದ ಕಪ್ಪು ಹಣವನ್ನು ಸಕ್ರಮಗೊಳಿಸಲು ಹೊರಟಿರುವ ಗಲ್ಫ್ ದೇಶದಲ್ಲಿರುವ ಹವಾಲಾ ಏಜೆಂಟರು ಹೊಸ ದಾರಿ ಕಂಡುಕೊಂಡಿದ್ದಾರೆ. 
ದುಬೈಯಲ್ಲಿರುವ ವ್ಯಾಪಾರಿಗಳು ಕಂಡುಕೊಂಡಿರುವ ಮಾರ್ಗ ಹೀಗಿದೆ: ಒಬ್ಬ ಅನಿವಾಸಿ ಭಾರತೀಯ ಹವಾಲಾ ಏಜೆಂಟ್ ಗೆ ಮೂರೂವರೆ ಸಾವಿರ ದಿರ್ಹಮ್ಸ್ ನೀಡಿದ್ದಾರೆ ಎಂದಿಟ್ಟುಕೊಳ್ಳಿ. ಅದಕ್ಕೆ ಬದಲಿಯಾಗಿ ಅನಿವಾಸಿ ಭಾರತೀಯ ಭಾರತದಲ್ಲಿ ಒಂದೂವರೆ ಲಕ್ಷ ರೂಪಾಯಿ ಪಡೆಯುತ್ತಾನೆ. ಇದೀಗ 500 ಮತ್ತು ಸಾವಿರ ರೂಪಾಯಿ ನೋಟುಗಳ ನಿಷೇಧದ ನಂತರ ಮೂರೂವರೆ ಸಾವಿರ ದಿರ್ಹಮ್ಸ್ ಗೆ 64 ಸಾವಿರ ರೂಪಾಯಿ ಸಿಗುತ್ತದೆ. ಇದು ಎರಡೂವರೆ ಲಕ್ಷಕ್ಕಿಂತ ಕಡಿಮೆಯಾಗಿರುವುದರಿಂದ ಹಣ ಠೇವಣಿಯಿಡುವ ಸಂದರ್ಭದಲ್ಲಿ ಯಾವುದೇ ಸಂಶಯ ಬರುವುದಿಲ್ಲ.
 ನನ್ನೊಬ್ಬ ಸ್ನೇಹಿತನನ್ನು ಹವಾಲಾ ಏಜೆಂಟ್ ನೋಟುಗಳನ್ನು ವಿನಿಯಮ ಮಾಡಿಕೊಳ್ಳಲು ಸಂಪರ್ಕಿಸಿದ್ದ.ಹಳೆ ಕರೆನ್ಸಿಯ ನೋಟುಗಳನ್ನ ಮನೆಗಳಿಂದ ಪಡೆದುಕೊಂಡು ಹೋಗುತ್ತಾರೆ. ಗಲ್ಫ್ ರಾಷ್ಟ್ರದಾದ್ಯಂತ ಇಂತಹ ಹವಾಲಾ ವ್ಯಾಪಾರಿಗಳಿದ್ದಾರೆ ಎಂದು ದುಬೈಯಲ್ಲಿ ಕೆಲಸ ಮಾಡುತ್ತಿರುವ ಜಾನ್ ಎಂಬುವವರು ಹೇಳುತ್ತಾರೆ.
ಹವಾಲಾ ಹಣ ಬದಲಾಯಿಸಿಕೊಳ್ಳುವ ವ್ಯವಸ್ಥೆಯಾಗಿದ್ದು ಅರಬ್ ರಾಷ್ಟ್ರಗಳಲ್ಲಿ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.  ಹಣವನ್ನು ಏಜೆಂಟ್ ಗೆ ನೀಡಲಾಗುತ್ತದೆ. ಆತ ತನ್ನ ಸಹಚರನಿಗೆ ಸಂಬಂಧಪಟ್ಟ ದೇಶದಲ್ಲಿ ಬದಲಿ ಹಣ ನೀಡಲು ಸಲಹೆ ನೀಡುತ್ತಾನೆ. ಹಣ ಸ್ಥಳೀಯ ಕರೆನ್ಸಿಯಲ್ಲಿ ಹವಾಲಾ ವ್ಯವಸ್ಥೆಗೆ ಹೋಗಿ ವಿದೇಶಿ ಕರೆನ್ಸಿ ಮಾಡಿ ಕಳುಹಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com