ನವದೆಹಲಿ: 500-1000 ನೋಟುಗಳ ನಿಷೇಧದಿಂದ ದೇಶದಲ್ಲಿ ಕೋಲಾಹಲ ಸೃಷ್ಠಿಯಾಗಿದೆ. ಈ ಮಧ್ಯೆ ಯೋಗ ಗುರು ಬಾಬಾ ರಾಮ್ ದೇವ್ ನೋಟುಗಳ ನಿಷೇಧ ಕುರಿತು ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ.
ಭಾರತೀಯ ಜನತಾ ಪಕ್ಷ(ಬಿಜೆಪಿ)ದಲ್ಲಿನ ಬಹುತೇಕರು ಅವಿವಾಹಿತರಾಗಿದ್ದು ಅವರಿಗೆ ಇದು ಮದುವೆ ಸೀಸನ್ ಅಂತ ಹೇಗೆ ಗೊತ್ತಾಗಬೇಕು. ಇದರಿಂದಾಗಿ ತಪ್ಪಾಗಿದೆ! ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.
ನವೆಂಬರ್ ತಿಂಗಳು ಮದುವೆ ಸೀಸನ್ ಆಗಿರುವುದರಿಂದ ನೋಟುಗಳ ನಿಷೇಧದಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಮ್ದೇವ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ನೋಟುಗಳ ನಿಷೇಧದ ನಿರ್ಧಾರವನ್ನು ಇನ್ನು 15 ದಿನ ಅಥವಾ ಒಂದು ತಿಂಗಳ ಕಾಲ ತಡವಾಗಿ ಘೋಷಿಸಿದ್ದರೆ, ಮದುವೆ ಸಮಾರಂಭಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೊಡೆತ ಉಂಟಾಗುತ್ತಿರಲಿಲ್ಲ. ಆದರೆ ಇದರಿಂದ ಜನರು ವರದಕ್ಷಿಣೆ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.