ಸ್ವದೇಶಿ ನಿರ್ಮಾಣದ ರುಸ್ತಮ್-2 ಡ್ರೋನ್ ಯಶಸ್ವಿ ಹಾರಾಟ

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ನಿರ್ಮಾಣದ ರುಸ್ತಮ್-2 ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು...
ರುಸ್ತಮ್-2
ರುಸ್ತಮ್-2
ಚಿತ್ರದುರ್ಗ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ನಿರ್ಮಾಣದ ರುಸ್ತಮ್-2 ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಶಕ್ತಿ ಸಿಕ್ಕಂತಾಗಿದೆ. 
ರುಸ್ತಮ್-2 (ಡ್ರೋನ್) ವಿಮಾನದ ಮೊದಲ ಹಾರಾಟ ಪರೀಕ್ಷೆಯನ್ನು ಚಿತ್ರದುರ್ಗದ ಚಳ್ಳಕೆರೆ ವರವು ಕಾಲವಿನ ವೈಮಾನಿಕ ಪರೀಕ್ಷಾ ತಾಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶತ್ರು ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುವ ಶಕ್ತಿ ರುಸ್ತಮ್-2 ಹೊಂದಿದೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈ ಮಧ್ಯೆ ರುಸ್ತಮ್-2 ಹಾರಾಟ ಯಶಸ್ವಿಯಾಗಿರುವುದು ಅತ್ಯಂತ ಮಹತ್ವ ಪಡೆದಿದೆ. 
ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಪಡೆಗಳ ಗುಪ್ತಚರ ಚಟುವಟಿಕೆಗಳು ಹಾಗೂ ದಾಳಿಗೆ ಇದು ಸಹಕಾರಿಯಾಗಲಿದೆ. ಇನ್ನು ರುಸ್ತಮ್-2 ಸತತ 25 ತಾಸು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಹಗಲು ರಾತ್ರಿ ವೀಕ್ಷಣೆಗೆ ಸಾಧ್ಯವಿರುವ ಕ್ಯಾಮೆರಾ, ರೆಡಾರ್ ಹಾಗೂ ಶಸ್ತ್ರಾಸ್ತ್ರಗಳು ಇದರಲ್ಲಿವೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಇದರ ನೆರವು ಪಡೆಯಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com