ನ.19 ರಂದು ನೋಟು ಬದಲಾಯಿಸಿಕೊಳ್ಳಲು ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ!
ದೇಶ
ನ.19 ರಂದು ನೋಟು ಬದಲಾಯಿಸಿಕೊಳ್ಳಲು ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ!
ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ನ.19 ರಂದು ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ನವದೆಹಲಿ: ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ನ.19 ರಂದು ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬ್ಯಾಂಕ್ ಗಳು ನ.19ರಂದು ಎಲ್ಲರಿಗೂ ನೋಟುಗಳನ್ನು ಬದಲಾವಣೆ ಮಾಡಿಕೊಡುವುದಿಲ್ಲ, ನೋಟು ಬದಲಾವಣೆ ಮಾಡಿಕೊಳ್ಳುವ ಸೌಲಭ್ಯ ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ಭಾರತೀಯ ಬ್ಯಾಂಕ್ ಒಕ್ಕೂಟದ ಅಧ್ಯಕ್ಷ ರಾಜೀವ್ ರಿಷಿ ತಿಳಿಸಿದ್ದಾರೆ.
ನೋಟುಗಳ ಬದಲಾವಣೆಯನ್ನು ಹೊರತುಪಡಿಸಿ ಬ್ಯಾಂಕ್ ಗಳಲ್ಲಿ ಉಳಿದ ಎಲ್ಲಾ ಸೇವೆಗಳು ಲಭ್ಯವಿರಲಿದ್ದು ಬಾಕಿ ಇರುವ ಕೆಲಸಗಳನ್ನು ಮಾಡಲಾಗುತ್ತದೆ ಎಂದು ರಾಜೀವ್ ರಿಷಿ ಹೇಳಿದ್ದಾರೆ.


