ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್ ಅಳಿಯನಿಗೆ ಜಾಮೀನು ನೀಡಲು ದೆಹಲಿ ಕೋರ್ಟ್ ನಕಾರ

ಕಳ್ಳತನ ಹಾಗೂ ಪತ್ನಿಯ ಆಸ್ತಿ ದುರ್ಬಳಕೆ ಮಾಡಿಕೊಂಡ ಆರೋಪದ ಜೈಲು ಪಾಲಾಗಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ....
ಶೀಲಾ ದಿಕ್ಷಿತ್
ಶೀಲಾ ದಿಕ್ಷಿತ್
ನವದೆಹಲಿ: ಕಳ್ಳತನ ಹಾಗೂ ಪತ್ನಿಯ ಆಸ್ತಿ ದುರ್ಬಳಕೆ ಮಾಡಿಕೊಂಡ ಆರೋಪದ ಜೈಲು ಪಾಲಾಗಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ಅಳಿಯನಿಗೆ ಜಾಮೀನು ನೀಡಲು ಶುಕ್ರವಾರ ದೆಹಲಿ ಕೋರ್ಟ್ ನಿರಾಕರಿಸಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಶೀಲಾ ದಿಕ್ಷಿತ್ ಅವರ ಮಗಳ ಗಂಡ ಸೈಯದ್ ಮೊಹಮ್ಮದ್ ಇಮ್ರಾನ್ ಅವರ ಜಾಮೀನು ಅರ್ಜಿಯನ್ನು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ವಜಾಗೊಳಿಸಿದ್ದಾರೆ. 
ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಅಲಸೂರು ಬಳಿ ಇಮ್ರಾನ್ ನನ್ನು ಬಂಧಿಸಿದ್ದರು. ಬಳಿಕ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಪಂಕಜ್ ಶರ್ಮಾ ಅವರು ಡಿಸೆಂಬರ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
1996ರಲ್ಲಿ ಸೈಯದ್ ಇಮ್ರಾನ್ ಅವರನ್ನು ಮದುವೆಯಾಗಿದ್ದ ಶೀಲಾ ದಿಕ್ಷಿತ ಅವರ ಮಗಳು ಲತಿಕಾ ಕಳೆದ 10 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇಮ್ರಾನ್ ವಿರುದ್ಧ ದೈಹಿಕ ಹಿಂಸೆ, ಕಳ್ಳತನ ಹಾಗೂ ಆಸ್ತಿ ದುರ್ಬಳಕೆ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com