ಜಡ್ಜ್ ಗಳ ಪಟ್ಟಿ ತಿರಸ್ಕರಿಸಿದ ಕೇಂದ್ರದ ಕ್ರಮವನ್ನು ಒಪ್ಪಲು ಸುಪ್ರೀಂ ನಕಾರ

ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ತನ್ನ ಮಂಡಳಿ(ಕೊಲ್ಲೆಜಿಯಂ) ಶಿಫಾರಸ್ಸು ಮಾಡಿದ್ದ 43 ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ತನ್ನ ಮಂಡಳಿ(ಕೊಲ್ಲೆಜಿಯಂ) ಶಿಫಾರಸ್ಸು ಮಾಡಿದ್ದ 43 ನ್ಯಾಯಮೂರ್ತಿಗಳ ಹೆಸರುಗಳನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನವೆಂಬರ್ 11ರಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಮಂಡಳಿ ಶಿಫಾರಸ್ಸು ಮಾಡಿ ಕಳುಹಿಸಿದ್ದ ಅರ್ಧದಷ್ಟು ಹೆಸರುಗಳನ್ನು ತಿರಸ್ಕರಿಸಿ ಮತ್ತೆ ಕಳುಹಿಸಿತ್ತು. 
ಸುಪ್ರೀಂ ಕೋರ್ಟ್ ನ ಮಂಡಳಿ  ಶಿಫಾರಸ್ಸು ಮಾಡಿ ಕಳುಹಿಸಿದ್ದ 77 ನ್ಯಾಯಾಧೀಶರ ಪೈಕಿ 34 ನ್ಯಾಯಾಧೀಶರನ್ನು ಕೇಂದ್ರ ಸರ್ಕಾರ ಸ್ವೀಕರಿಸಿ ಉಳಿದ 43 ಹೆಸರುಗಳನ್ನು ವಾಪಸ್ಸು ಕಳುಹಿಸಿತ್ತು. 
ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿ, ಕೇಂದ್ರ ಸರ್ಕಾರ ಆಗಸ್ಟ್ 7ರಂದು ಸಲ್ಲಿಸಿದ ಕರಡು ನಿವೇದನಾ ನಿಲುವಳಿಗೆ ಮಂಡಳಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com