ಮುಜಾಫರ್ ನಗರ ಗಲಭೆ (ಸಂಗ್ರಹ ಚಿತ್ರ)
ದೇಶ
ಮುಜಾಫರ್ ನಗರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಬಂಧನ
2013ರ ಮುಜಾಫರ್ ನಗರ ಗಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಜಾಫರ್ ನಗರ: 2013ರ ಮುಜಾಫರ್ ನಗರ ಗಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ಹಲವು ಲೂಟಿ ಹಾಗೂ ಕೊಲೆ ಪ್ರಕರಣಗಳಲ್ಲಿ ಬೇಕಾಗಿರುವ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಹಿಡಿದುಕೊಟ್ಟವರಿಗೆ 50,000 ರೂ ಗಳ ಬಹುಮಾನ ಘೋಶಿಸಲಾಗಿತ್ತು. ಮುಜಾಫರ್ ನಗರ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಂಧಿತ ವ್ಯಕ್ತಿ ಕೊಲೆ ಸುಲಿಗೆ ಸೇರಿದಂತೆ ಒಟ್ಟು 12 ಪ್ರಕರಣಗಳಲ್ಲಿ ಬೇಕಾಗಿದ್ದು, ನ.18 ರಂದು ನಡೆದ ಎನ್ ಕೌಂಟರ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸೋನಿಯಾ ಸಿಂಗ್ ತಿಳಿಸಿದ್ದಾರೆ.
ಬಂಧಿತನ ವಿರುದ್ಧ 2013 ರಲ್ಲಿ ನಡೆದ ಮುಜಾಫರ್ ನಗರ ಗಲಭೆ ಪ್ರಕರಣದಲ್ಲಿ ಮೊಹಮ್ಮದ್ ಪುರ್ ಗ್ರಾಮದಲ್ಲಿ ಮೂವರು ಯುವಕರನ್ನು ಹತ್ಯೆ ಮಾಡಿರುವ ಆರೋಪವಿದೆ.

