ನ.10ರಿಂದ 18 ರ ವರೆಗೆ ಬ್ಯಾಂಕ್ ಗಳು ಕೌಂಟರ್ ಹಾಗೂ ಎಟಿಎಂ ಮೂಲಕ 1,03,316 ಕೋಟಿ ರೂಪಾಯಿಯಷ್ಟು (Rs 1.03 ಟ್ರಿಲಿಯನ್) ಹಣವನ್ನು ವಿತರಣೆ ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ. ರದ್ದುಗೊಂಡಿರುವ ನೋಟುಗಳನ್ನು ಪಡೆದು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಲು ಹಾಗೂ ಹಳೆಯ ನೋಟುಗಳನ್ನು ಜಮಾ ಮಾಡಲು ಆರ್ ಬಿಐ ಕೌಂಟರ್ ಗಳಲ್ಲಿ, ವಾಣಿಜ್ಯ ಬ್ಯಾಂಕ್ ಗಳಲ್ಲಿ, ಪ್ರಾದೇಶಿಕ ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್ ಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನ.10 ರಿಂದ ಪ್ರಾರಂಭವಾಗಿ ನ.18 ರ ವರೆಗೆ ನಡೆದಿರುವ ಹಳೆಯ ನೋಟುಗಳ ಬದಲಾವಣೆ/ ಜಮಾವಣೆ ಪ್ರಕ್ರಿಯೆಯಲ್ಲಿ ಒಟ್ಟು 5,44,571( ವಿನಿಮಯ ಮಾಡಿಕೊಳ್ಳಲು ನೀಡಿದ ಹಳೆಯ ನೋಟುಗಳ ಮೊತ್ತ: 33,006 ಕೋಟಿ, ಖಾತೆಯಲ್ಲಿ ಜಮಾವಣೆಯಾದ ಹಳೆಯ ನೋಟುಗಳ ಮೊತ್ತ: 5,11,565 ಕೋಟಿ) ಲಕ್ಷ ಕೋಟಿ ಮೊತ್ತದ ಹಳೆಯ ನೋಟುಗಳು ಜಮಾವಣೆಯಾಗಿವೆ. ಓವರ್ ಡ್ರಾಫ್ಟ್ ಹಾಗೂ ಕ್ಯಾಷ್ ಕ್ರೆಡಿಟ್ ಖಾತೆಗಳಿಂದ ವಾರಕ್ಕೆ 50 ಸಾವಿರ ರೂ ಗಳನ್ನು ವಿತ್ ಡ್ರಾ ಮಾಡಬಹುದಾಗಿದೆ ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.