ನ.1 ರಿಂದ ಡಿ.31 ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ
ದೇಶ
ನ.1 ರಿಂದ ಡಿ.31 ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ
500, 1000 ರೂ ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿದ್ದು ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲದ ಕಂತು ಪಾವತಿ ಮಾಡಲು ಬ್ಯಾಂಕ್ 60 ದಿನಗಳ ಹೆಚ್ಚುವರಿ ಕಾಲಾವಕಾಶ
ಮುಂಬೈ: 500, 1000 ರೂ ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿದ್ದು ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಬ್ಯಾಂಕ್ 60 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಈ ಅವಕಾಶ ನ.1 ರಿಂದ ಡಿ.31 ರವರೆಗೆ ಪಾವತಿ ಮಾಡಬೇಕಿರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಆರ್ ಬಿಐ ಹೇಳಿದೆ.
ಒಂದು ಕೋಟಿಗಿಂತ ಕಡಿಮೆ ಸಾಲ ಪಡೆದ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದ್ದು, ನ.1ರಿಂದ ಡಿ.31 ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಒಂದು ಕೋಟಿ ರೂ ಗಿಂತ ಕಡಿಮೆ ಇರುವ ವ್ಯಾಪಾರ ಅಥವಾ ವೈಯಕ್ತಿಕ ವಿಭಾಗದ ದೀರ್ಘಾವಧಿಯ ಸಾಲ, ಬ್ಯಾಂಕೇತರ ಹಣಕಾಸು ಕಂಪನಿ (ಮೈಕ್ರೋ ಫೈನಾನ್ಸ್ ಸಂಸ್ಥೆ)ಗಳ ಸಾಲದ ಕಂತುಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಆರ್ ಬಿಐ ನೀಡಿರುವ ಹೆಚ್ಚುವರಿ ಕಾಲಾವಕಾಶ ಗೃಹ ಸಾಲ, ಕೃಷಿ ಸಾಲಗಳಿಗೂ ಅನ್ವಯಿಸಲಿದ್ದು ಎಲ್ಲಾ ನಿಯಂತ್ರಿತ ಹಣಕಾಸು ಸಂಸ್ಥೆಗಳು ಆರ್ ಬಿಐ ನ ನಿಯಮಗಳನ್ನು ಪಾಲಿಸಬೇಕು ಎಂದು ಆರ್ ಬಿಐ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ