ಜಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಗೆ ಎನ್ಐಎ ಸಿದ್ಧತೆ?

ಇಸ್ಲಾಂ ನ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ವಿದೇಶದಲ್ಲಿರುವ ಜಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ರಾಷ್ಟ್ರೀಯ ತನಿಖಾ ದಳ ಇಂಟರ್ ಪೋಲ್ ನೆರವು ಪಡೆಯುವ ಸಾಧ್ಯತೆ ಇದೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್
ನವದೆಹಲಿ: ಇಸ್ಲಾಂ ನ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ವಿದೇಶದಲ್ಲಿರುವ ಜಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ರಾಷ್ಟ್ರೀಯ ತನಿಖಾ ದಳ ಇಂಟರ್ ಪೋಲ್ ನೆರವು ಪಡೆಯುವ ಸಾಧ್ಯತೆ ಇದೆ. 
ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯ್ಕ್ ವಿಚಾರಣೆ ನಡೆಯಬೇಕಿದ್ದು, ಸಮನ್ಸ್ ಜಾರಿ ಮಾಡಲು ಎನ್ಐಎ ನಿರ್ಧರಿಸಿದೆ, ಒಂದು ವೇಳೆ ಸಮನ್ಸ್ ಗೆ ಉತ್ತರ ನೀಡದೇ ಇದ್ದಲ್ಲಿ ಜಾಕಿರ್ ನಾಯ್ಕ್ ಗೆ ಇಂಟರ್ ಪೋಲ್ ನೆರವಿನಿಂದ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 
ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಸೌದಿ ಅರೇಬಿಯಾದಲ್ಲಿರುವ ಜಾಕಿರ್ ನಾಯ್ಕ್ ಗೆ ಜಾಮೀನಿ ರಹಿತ ವಾರೆಂಟ್ ಹಾಗೂ ಇಂಟರ್ ಪೋಲ್ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗುತ್ತದೆ, ಜಾಕಿರ್ ನಾಯ್ಕ್ ನ ಭಾಷಣಗಳನ್ನು ಕೇಳಿದ್ದ 50 ಜನರು ಭಯೋತ್ಪಾದನೆಯೆಡೆಗೆ ಆಕರ್ಷಿತರಾಗಿದ್ದು, ಜಾಕಿರ್ ನಾಯ್ಕ್ ನ ಭಾಷಣಗಳು  ದ್ವೇಷಪೂರಿತ ಭಾಷಣಗಳಾಗಿದ್ದರಿಂದ ವಿವಾದಿತ ಧರ್ಮ ಪ್ರಚಾರಕ ಜಾಕೀರ್ ನಾಯ್ಕ್ ನೇತೃತ್ವದ ಎನ್‌ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಅನ್ನು ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com