ಇಸ್ಲಾಂ ಭಯೋತ್ಪಾದನೆಯನ್ನು ಬುಡದಿಂದ ಕಿತ್ತು ಹಾಕಬೇಕಾಗಿದೆ: ಸುಬ್ರಮಣ್ಯಸ್ವಾಮಿ

ದೇಶದಲ್ಲಿ ಸಮುದಾಯಗಳ ನಡುವೆ ಗೊಂದಲ ಸೃಷ್ಠಿಸುತ್ತಿರುವ ಇಸ್ಲಾಂ ಭಯೋತ್ಪಾದನೆ ನಿರ್ನಾಮಗೊಳಿಸಲು ಸಮರ್ಥ ನೀತಿಯನ್ನ ಜಾರಿಗೆ ತರಬೇಕು ಎಂದು
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Updated on

ಥಾಣೆ: ದೇಶದಲ್ಲಿ ಸಮುದಾಯಗಳ ನಡುವೆ ಗೊಂದಲ ಸೃಷ್ಠಿಸುತ್ತಿರುವ ಇಸ್ಲಾಂ ಭಯೋತ್ಪಾದನೆ ನಿರ್ನಾಮಗೊಳಿಸಲು ಸಮರ್ಥ ನೀತಿಯನ್ನ ಜಾರಿಗೆ ತರಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಇಸ್ಲಾಂ ಭಯೋತ್ಪಾದನೆ ದೇಶದಲ್ಲಿ ಅರಾಜತಕೆ ಹಾಗೂ ಅವ್ಯವಸ್ಥೆ ಸೃಷ್ಟಿಸಲು ಸದಾ ಪ್ರಯತ್ನಿಸುತ್ತಿದೆ. ಜೊತೆಗ ದೇಶದ ಸಮುದಾಯಗಳ ನಡುವೆ ವೈಮನಸ್ಯ ತರಲು ಅವಿರತವಾಗಿ ಶ್ರಮಿಸುತ್ತಿದೆ. ಎಲ್ ಟಿ ಟಿ ಇ ಮತ್ತು ತಮಿಳು ಟೈಗರ್ಸ್ ಬೋಡೋಸ್ ಮತ್ತು ನಕ್ಸಲರನ್ನು ಹತ್ತಿಕ್ಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅದೇ ಮಾದರಿಯಲ್ಲಿ ದೇಶದಲ್ಲಿ ತಳವೂರಿರುವ ಇಸ್ಲಾಂ ಭಯೋತ್ಪಾದನೆಯನ್ನು ಬೇರು ಮಟ್ಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯದಲ್ಲಿ ಐಎಸ್ ಭಯೋತ್ಪಾದಕರು ದಕ್ಷಿಣ ರಾಜ್ಯಗಳಲ್ಲಿ ತಮ್ಮ ಚಟುವಟಿಕೆ ಆರಂಭಿಸಿದ್ದಾರೆ. ಅವರನ್ನು ತಳಮಟ್ಟದಲ್ಲೇ ಸದೆಬಡಿಯಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com