ಉಪಚುನಾವಣೆ ಫಲಿತಾಂಶ ನೋಟು ನಿಷೇಧಕ್ಕೆ ಜನರ ಆಕ್ರೋಶದ ಪ್ರತೀಕ: ಮಮತಾ ಬ್ಯಾನರ್ಜಿ

ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಪಕ್ಷದ ಗೆಲುವು ನೋಟು ನಿಷೇಧದ ವಿರುದ್ಧ ಜನತೆ ಸಿಡಿದೆದ್ದಿರುವುದನ್ನು ಸೂಚಿಸುತ್ತದೆ...
ಉಪಚುನಾವಣೆ ಫಲಿತಾಂಶ ನೋಟು ನಿಷೇಧಕ್ಕೆ ಜನರ ಆಕ್ರೋಶದ ಪ್ರತೀಕ: ಮಮತಾ ಬ್ಯಾನರ್ಜಿ
ಉಪಚುನಾವಣೆ ಫಲಿತಾಂಶ ನೋಟು ನಿಷೇಧಕ್ಕೆ ಜನರ ಆಕ್ರೋಶದ ಪ್ರತೀಕ: ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಪಕ್ಷದ ಗೆಲುವು ನೋಟು ನಿಷೇಧದ ವಿರುದ್ಧ ಜನತೆ ಸಿಡಿದೆದ್ದಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. 
ನೋಟು ನಿಷೇಧದ ವಿರುದ್ಧ ಜನತೆ ಸಿಡಿದೆದ್ದಿದ್ದಾರೆ. ಚುನಾವಣೆಯ ಫಲಿತಾಂಶ ಅದರ ಸೂಚನೆ, ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಆಕ್ರೋಶವನ್ನು ತೋರಲು ಮತದಾನವನ್ನು ಬಳಸಿಕೊಂಡಿದ್ದಾರೆ, ಈ ಆರ್ಥಿಕ ತುರ್ತುಪರಿಸ್ಥಿತಿ ವಿರುದ್ಧ  ಎಲ್ಲಾ ರಾಜಕೀಯ ಪಕ್ಷಗಳೂ ಹೋರಾಡಬೇಕು ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. 
ಜನಗಳ ಗೆಲುವು ಅತಿ ದೊಡ್ಡ ಗೆಲುವಾಗಿದ್ದು ಇದಕ್ಕಾಗಿ ಪಶ್ಚಿಮ ಬಂಗಾಳದ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೂಚ್‍ಬೆಹರ್ ಮತ್ತು ಟಮ್ಲುಕ್ ಮೋಂಟೇಶ್ವರ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಎಲ್ಲ ಮೂರು ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com