ಪುದುಚೆರಿ ಉಪಚುನಾವಣೆ: ಸಿಎಂ ವಿ ನಾರಾಯಣಸ್ವಾಮಿ ಗೆ 11,151 ಮತಗಳ ಗೆಲುವು

ನೆಲ್ಲಿತೋಪೆ ವಿಧಾನಸಭೆ ಉಪ ಚುನಾವಣೆಯಲ್ಲಿ ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ 11,151 ಮತಗಳಿಂದ ಜಯಗಳಿಸಿದ್ದಾರೆ...
ವಿ.ನಾರಾಯಣಸ್ವಾಮಿ
ವಿ.ನಾರಾಯಣಸ್ವಾಮಿ

ಪುದುಚೆರಿ: ನೆಲ್ಲಿತೋಪೆ ವಿಧಾನಸಭೆ ಉಪ ಚುನಾವಣೆಯಲ್ಲಿ ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ 11,151 ಮತಗಳಿಂದ ಜಯಗಳಿಸಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಎಐಎಡಿಎಂಕೆಯ ಓಂ ಶಕ್ತಿ ಶೇಖರ್ ಅವರನ್ನು ಸೋಲಿಸುವುದರ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಮುಖ್ಯಮಂತ್ರಿಯಾಗಿ ಮುಂದುವರಿಯಯಲಿದ್ದಾರೆ.

ಚುನಾಯಿತ ಪ್ರತಿನಿಧಿಯಲ್ಲದ ನಾರಾಯಣಸ್ವಾಮಿ ಜೂನ್ 6 ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಪುದುಚೆರಿಯ ಯಾವುದೇ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಆರಿಸಿ ಬರಬೇಕಾಗಿತ್ತು.

ಒಟ್ಟು ಚಲಾವಣೆಯಾದ 26564 ಮತಗಳಲ್ಲಿ ನಾರಾಯಣಸ್ವಾಮಿ 18,709 ಮತ ಪಡೆದಿದ್ದಾರೆ. ತಮ್ಮ ಪ್ರತಿಸ್ಫರ್ಧಿ  ಓಂ ಶಕ್ತಿ ಶೇಖರ್ 7565 ಮತಗಳನ್ನು ಪಡೆದಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾರಾಯಣಸ್ವಾಮಿ ಭಾರಿ ಮತಗಳ ಅಂತರದಿಂದ ಜಯಗಳಿಸಿದ್ದರು, ಆದರೆ ಈ ಬಾರಿ ಚುನಾವಣೆಯಲ್ಲಿ ಮತಗಳ ಅಂತರ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com