ಕಾಶ್ಮೀರ ರಾಜಕೀಯ ವಿವಾದ, ರಾಜಕೀಯ ಪರಿಹಾರ ಬೇಕಿದೆ: ಒಮರ್ ಅಬ್ದುಲ್ಲಾ

ಕಾಶ್ಮೀರ ಸಮಸ್ಯೆ ರಾಜಕೀಯವಾದದ್ದು, ಹೀಗಾಗಿ ಈ ಸಮಸ್ಯೆಗೆ ರಾಜಕೀಯವಾಗಿಯೇ ಪರಿಹಾರ ಕಂಡು ಹಿಡಿದು ರಾಜ್ಯದಲ್ಲಿ ಶಾಂತಿ ಕಾಪಾಡಬೇಕು...
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ

ಜಮ್ಮು: ಕಾಶ್ಮೀರ ಸಮಸ್ಯೆ ರಾಜಕೀಯವಾದದ್ದು, ಹೀಗಾಗಿ ಈ ಸಮಸ್ಯೆಗೆ ರಾಜಕೀಯವಾಗಿಯೇ ಪರಿಹಾರ ಕಂಡು ಹಿಡಿದು ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ದೊಡಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿರುವುದು ಕಾಶ್ಮೀರದಲ್ಲಿ ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಆದರೆ ಇದೊಂದು ಭ್ರಮೆ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ, ಪರಿಸ್ಥಿತಿಯ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರೇ ತಿಳಿಯುತ್ತದೆ ಸಮಸ್ಯೆ ಹಿಂದೆ ಇರುವುದು ಆರ್ಥಿಕ ಸಮಸ್ಯೆಯೋ ಅಥವಾ ಕಾನೂನು ಸುವ್ಯವಸ್ಥೆಯೋ ಎಂಬುದರ ಬಗ್ಗೆ ತಿಳಿಯುತ್ತದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com