
ನವದೆಹಲಿ: ಬಿಹಾರ ಮೂಲದ ಉದ್ಯಮಿಯೊಬ್ಬ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು ಮೂರುವರೆ ಕೋಟಿ ರು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಹಿಸ್ಸಾರ್ ನಿಂದ ಬಂದ ವಿಮಾನ ಬೆಳಗ್ಗೆ 10. 07 ನಿಮಿಶಕ್ಕೆ ನಾಗಾಲ್ಯಾಂಡ್ ನ ದಿಮಾಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಬಿಹಾರದ ಸಿಂಗ್ ಎಂಬ ವ್ಯಕ್ತಿ ಬಳಿಯಿಂದ ನಿಷೇದಿಸಲ್ಪಟ್ಟ 500 ಹಾಗೂ 1.000 ರು ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆತನನ್ನು ದೆಹಲಿಗೆ ಕರೆತರುವ ವೇಳೆಗೆ ಅಂದರೆ 12.15 ನಿಮಿಷದೊಳಗೆ ಜಪ್ತಿ ಮಾಡಿದ ಹಣ ಕಣ್ಮರೆಯಾಗಿದೆ ಎಂದು ಹೇಳಲಾಗಿದೆ.
ಮೊದಲಿಗೆ ಉದ್ಯಮಿಯಿಂದ 5.5 ಕೋಟಿ ರು ಹಣ ವಶಪಡಿಸಿಕೊಳ್ಳಲಾಯಿತು ಎಂದು ಹೇಳಲಾಯಿತು. ನಂತರ 3.5 ಕೋಟಿ ರು ವಶ ಪಡಿಸಿಕೊಳ್ಳಲಾಯಿತು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಣದ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಣ ದೆಹಲಿಯ ರಾಜಕಾರಣಿಯೊಬ್ಬರಿಗೆ ಸೇರಿದ್ದು, ಅದನ್ನು ಉದ್ಯಮಿ ಮೂಲಕ ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
Advertisement