ಕಾಶ್ಮೀರದ ಶೇ.90ರಷ್ಟು ಮಂದಿ ಶಾಂತಿ ಬಯಸುತ್ತಾರೆ: ಶ್ರೀ ರವಿ ಶಂಕರ್ ಗುರೂಜಿ

ಕಾಶ್ಮೀರದಲ್ಲಿರುವ ಶೇ 90 ರಷ್ಟು ಜನ ಶಾಂತಿಯನ್ನು ಬಯಸುತ್ತಾರೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ...
ಶ್ರೀ ರವಿ ಶಂಕರ್ ಗುರೂಜಿ
ಶ್ರೀ ರವಿ ಶಂಕರ್ ಗುರೂಜಿ

ಜಮ್ಮು: ಕಾಶ್ಮೀರದಲ್ಲಿರುವ ಶೇ 90 ರಷ್ಟು ಜನ ಶಾಂತಿಯನ್ನು ಬಯಸುತ್ತಾರೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಜಮ್ಮುವಿನಲ್ಲಿ ನಡೆದ ಸೌತ್ ಏಷಿಯನ್ ಫೋರಂ ಫಾರಂ ಪೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆ ಸೃಷ್ಟಿಯಾಗಿರುವುದು ಕಾಶ್ಮೀರಿಗಳಿಂದಲೇ,  ಹೀಗಾಗಿ ಅವರೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು, ಅದಕ್ಕಾಗಿಯೇ ನಾವು ವೇದಿಕೆ ಕಲ್ಪಿಸಿದ್ದೇವೆ ಎಂದು ಹೇಳಿದ್ದಾರೆ.

ಶೇ. 90 ರಷ್ಟು ಜನಕ್ಕೆ ಶಾಂತಿ ಬೇಕಾಗಿದೆ. ಆದರೆ ಬಂದೂಕಿನ ಭಯದಿಂದ ಯಾರೊಬ್ಬರು ಬಾಯಿ ತೆರೆಯದೇ ಬಾಯಿ ಮುಚ್ಚಿದ್ದಾರೆ, ದೇಶದ ಅಭಿವೃದ್ಧಿಗಾಗಿ ಅವರು ಮುಚ್ಚಿರುವ ತಮ್ಮ ಬಾಯಿ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು, ಇದೊಂದು ಸೂಕ್ತ ವೇದಿಕೆಯಾಗಿದೆ. ಹಣ ಹಸುವಿಗಾಗಿ ಕಾಶ್ಮೀರದಲ್ಲಿ ಕದನ ನಡೆಯುತ್ತಿದೆ. ಇದರಿಂದ ಇಲ್ಲಿನ ಜನಗಳು ತೊಂದರೆ ಅನುಭವುಸುತಿತುರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com