ಶಬರಿಮಲೆ ದೇವಸ್ಥಾನದಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಕಾಣಿಕೆ ಸಲ್ಲಿಸಲು ಅವಕಾಶ

500-1000 ನೋಟುಗಳ ನಿಷೇಧದ ಬಳಿಕ ನೋಟುಗಳ ಚಲಾವಣೆಗೆ ಜನಸಾಮಾನ್ಯರು ಪರದಾಡುವಂತಾಗಿದೆ. ಆದರೆ ಶಬರಿಮಲೆನಲ್ಲಿ ಮಾತ್ರ ಭಕ್ತರು
ಸ್ವಾಮಿ ಅಯ್ಯಪ್ಪಸ್ವಾಮಿ ದೇವಸ್ಥಾನ
ಸ್ವಾಮಿ ಅಯ್ಯಪ್ಪಸ್ವಾಮಿ ದೇವಸ್ಥಾನ
ಶಬರಿಮಲೆ: 500-1000 ನೋಟುಗಳ ನಿಷೇಧದ ಬಳಿಕ ನೋಟುಗಳ ಚಲಾವಣೆಗೆ ಜನಸಾಮಾನ್ಯರು ಪರದಾಡುವಂತಾಗಿದೆ. ಆದರೆ ಶಬರಿಮಲೆನಲ್ಲಿ ಮಾತ್ರ ಭಕ್ತರು ಸುಲಭವಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ಕಾಣಿಕೆ ಸಲ್ಲಿಸಬಹುದು. 
ಇಂತದೊಂದು ವ್ಯವಸ್ಥೆಯನ್ನು ಆಳಪುಳ ಸಬ್ ಕಲೆಕ್ಟರ್ ಇ ಚಂದ್ರಶೇಖರ್ ಅವರು ಇ-ಹುಂಡಿ ಸೇವೆಯನ್ನು ಕಾರ್ಡ್ ಸ್ವೈಪ್ ಮಾಡುವ ಮೂಲಕ ಉದ್ಘಾಟಿಸಿ ಮೊದಲ ಕಾಣಿಕೆಯನ್ನು ಸಲ್ಲಿಸಿದರು. ಮೊದಲ ಬಾರಿಗೆ ಒಂದು ಸ್ವೈಪ್ ಯಂತ್ರವನ್ನು ಅಳವಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗಲಿದೆ.
ಸ್ವೈಪ್ ಯಂತ್ರವನ್ನು ಎಲ್ಲಿ ಅಳವಡಿಸಲಾಗಿದೆ?
ಸೋಪನಮ್ ನ ಎಡ ಬದಿಯ ಕೌಂಟರ್ ನಲ್ಲಿ ಅವಳಡಿಸಲಾಗಿದೆ. 
ಯಾವ ಸಮಯದಲ್ಲಿ ಸ್ವೈಪ್ ಮಾಡಬಹುದು?
ಅಯ್ಯಪ್ಪ ದೇವಸ್ಥಾನ ತೆರೆಯುವುದರಿಂದ ಮುಚ್ಚುವವರೆಗೂ ಈ ವ್ಯವಸ್ಥೆ ಬಳಕೆಯಲ್ಲಿರಲಿದೆ. 
ಇದನ್ನು ನಾವು ಹೇಗೆ ಬಳಸಬಹುದು?
ಕೌಂಟರ್ ನಲ್ಲಿ ಅವಳಡಿಸಲಾಗಿರುವ ಸ್ವೈಪ್ ಯಂತ್ರದಲ್ಲಿ ನಿಮ್ಮ ಕಾರ್ಡ್ ಅನ್ನು ಸ್ವೈಪ್ ಮಾಡಿ ಅಲ್ಲಿ ಪಡೆದ ರಶೀದಿಯನ್ನು ಇ-ಹುಂಡಿಯಲ್ಲಿ ಹಾಕಬೇಕು. 
ಎಂತಹ ಕಾರ್ಡ್ ಗಳನ್ನು ಬಳಸಬಹುದು?
ಯಾವುದೇ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಳಸಬಹುದು. 
ಡೆಬಿಟ್ ಕಾರ್ಡಿನ ಮಿತಿ?
ಹತ್ತು ರುಪಾಯಿ ಮೊತ್ತದಿಂದ ಹಿಡಿದು ನಿಮ್ಮ ಶಕ್ತ್ಯಾನುಸಾರ, ಯಾವುದೇ ಮಿತಿಯಿಲ್ಲ. 
ಕ್ರೆಡಿಟ್ ಕಾರ್ಡ್ ಬಳಸಬಹುದಾ?
ಕ್ರೆಡಿಟ್ ಕಾರ್ಡ್ ಗಳನ್ನು ಬಳಸಬಹುದು, 1 ರುಪಾಯಿಯಿಂದ ಹಿಡಿದು ನಿಮ್ಮ ಬ್ಯಾಂಕ್ ಗಳು ಕೊಡುವ ನಿರ್ದಿಷ್ಟ ಮೊತ್ತದವರೆಗೂ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com