ಗುವಾಹತಿ: ಭಾರಿ ಮೊತ್ತದ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಸಿಬ್ಬಂದಿ ಶುಕ್ರವಾರ ನಾಗಾಲ್ಯಾಂಡ್ ನ ದಿಂಪೂರ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ವ್ಯಕ್ತಿಯೊಬ್ಬ ಭಾರಿ ಮೊತ್ತದ ಹಣದೊಂದಿಗೆ ವಿಮಾನದ ಮೂಲಕ ದಿಂಪೂರ್ ಗೆ ತೆರಳುತ್ತಿದ್ದಾನೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಸಿಐಎಸ್ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ವ್ಯಕ್ತಿ ಅಜಯ್ ಸಿಂಗ್ ಎಂದು ಗುರುತಿಸಲಾಗಿದ್ದು, ಕೋಲ್ಕತಾದಿಂದ ದಿಂಪೂರ್ ಗೆ ಹಣ ಸಾಗಿಸುತ್ತಿದ್ದ ಎನ್ನಲಾಗಿದೆ. ಆದರೆ ಎಷ್ಟು ಹಣ ಸಾಗಿಸುತ್ತಿದ್ದ ಎಂಬುದುರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ದಿಂಪೂರ್ ವಿಮಾನ ನಿಲ್ದಾಣದ ನಿರ್ದೇಶಕ ಎಂ.ಝಿಂಬೋ ಹಾಗೂ ಪೊಲೀಸ್ ಆಯುಕ್ತ ಲಿರೆಮೋ ಲೋತಾ ಅವರು ಭಾರಿ ಮೊತ್ತದ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಖಚಿತಪಡಿಸಿದ್ದಾರೆ.
ಮಂಗಳವಾರವಷ್ಟೇ ಇದೇ ವಿಮಾನ ನಿಲ್ದಾಣದಲ್ಲಿ 3.5 ಕೋಟಿ ರುಪಾಯಿ ನಗದು ಸಾಗಿಸುತ್ತಿದ್ದ ಅಮರ್ ಜೀತ್ ಸಿಂಗ್ ಎಂಬ ಉದ್ಯಮಿಯನ್ನು ಬಂಧಿಸಲಾಗಿತ್ತು.