ನಳಂದ ವಿವಿ ಕುಲಪತಿ ಜಾರ್ಜ್ ಯಿಯೋ ರಾಜೀನಾಮೆ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಂತರ ನಳಂದ ವಿಶ್ವ ವಿದ್ಯಾನಿಲಯದ 2ನೇ ಕುಲಪತಿ ಜಾರ್ಜ್ ಯಿಯೋ ತಮ್ಮ ಸ್ಥಾನಕ್ಕೆ ರಾಜೀನಾಮೆ ...
ಜಾರ್ಜ್ ಯಿಯೋ
ಜಾರ್ಜ್ ಯಿಯೋ

ನವದೆಹಲಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಂತರ ನಳಂದ ವಿಶ್ವ ವಿದ್ಯಾನಿಲಯದ 2ನೇ ಕುಲಪತಿ ಜಾರ್ಜ್ ಯಿಯೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯಾವುದೇ ನೋಟೀಸ್ ನೀಡದೇ ಜಾರ್ಜ್ ಯಿಯೋ ರಾಜೀನಾಮೆ ನೀಡಿರುವುದು ವಿವಿ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದೆಂದು ಹೇಳಲಾಗುತ್ತಿದೆ.

ಅಮರ್ತ್ಯ ಸೇನ್ ತಮ್ಮ ವಿವಿಯೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧ ಕಳೆದು ಕೊಂಡ ನಂತರ, ವಿವಿ ಆಡಳಿತ ಮಂಡಳಿ ಪುನರ್ ರಚಿಸಲಾಗಿತ್ತು.

ತನ್ನನ್ನು ಕುಲಪತಿ ಹುದ್ದೆಗೆ ಆಹ್ವಾನಿಸಿದಾಗ ವಿವಿಗೆ ಸ್ವಾಯತ್ತತೆ ನೀಡಲಾಗುವುದು ಎಂದು ಹೇಳಲಾಗಿತ್ತು, ಆದರೆ ಈಗ ಅದರ ಸುಳಿವೇ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ಯಾವುದೇ ನೋಟಿಸ್ ನೀಡದೇ ರಾಜೀನಾಮೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾಕತಾಳಿಯವೇನೋ ಎಂಬಂತೆ ವಿಶ್ವ ವಿದ್ಯಾನಿಲಯ ಸಂಸ್ಥಾಪನಾ ದಿನದಂದೇ ಯಿಯೋ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ನವೆಂಬರ್ 21 ರಂದು ಅಮರ್ತ್ಯ ಸೇನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com