ಐಆರ್ ಎಫ್ ಮೇಲಿನ ನಿಷೇಧ ಮುಸ್ಲಿಮರ, ಶಾಂತಿ, ಪ್ರಜಾಪ್ರಭುತ್ವ, ನ್ಯಾಯದ ಮೇಲಿನ ದಾಳಿ, ಇದರ ವಿರುದ್ಧ ಹೋರಾಟ ಮಾಡುವುದಾಗಿ ಜಾಕಿರ್ ನಾಯ್ಕ್ ತಿಳಿಸಿದ್ದಾರೆ. ಐಆರ್ ಎಫ್ ನ್ನು ಉಗ್ರ ಸಂಘಟನೆ ಎಂದು ಗುರುತಿಸಿ ನಿಷೇಧಿಸಿರುವ ಬಗ್ಗೆ ಮೂರು ಪುಟಗಳ ಪತ್ರ ಬರೆದಿರುವ ಜಾಕಿರ್ ನಾಯ್ಕ್, ಐಆರ್ ಎಫ್ ನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ತನಿಖೆ, ವರದಿಗಳು ಸಲ್ಲಿಕೆಯಾಗುವುದಕ್ಕೂ ಮುನ್ನವೇ ಕೆಲವು ತಿಂಗಳ ಹಿಂದೆ ತೆಗೆದುಕೊಂಡ ನಿರ್ಧಾರ ಕೋಮುವಾದದ ನಿರ್ಧಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.